ಮೋದಿ ಆಗಮಿಸುವ ರಸ್ತೆಯಲ್ಲಿ ಬಂದ ಬೈಕ್ ಸವಾರನ‌ ಮೇಲೆ ಇನ್ಸ್ ಪೆಕ್ಟರ್ ದರ್ಪ !            

Crime

(ನ್ಯೂಸ್ ಕಡಬ) newskadaba.com  ಹುಬ್ಬಳ್ಳಿ, ಜ.13. ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನ ನಿಲ್ದಾಣದ ರಸ್ತೆಯಲ್ಲಿ ಬಂದ ಬೈಕ್‌ ಸವಾರರೊಬ್ಬರ ಮೇಲೆ ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿ ದರ್ಪ ತೋರಿದ್ದಾರೆ ಎನ್ನಲಾಗಿದೆ. ಬೈಕ್‌ನಲ್ಲಿ ಮಗುವಿನೊಂದಿಗೆ ಬಂದ ವ್ಯಕ್ತಿಯೊಬ್ಬನಿಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪೊಲೀಸ್‌ ಇನ್ಪೆಪೆಕ್ಟರ್‌ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ‌.

ಹುಬ್ಬಳ್ಳಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ‌ ನೀಡಲು ಹುಬ್ಬಳ್ಳಿಗೆ ಬಂದಿದ್ದಾರೆ. ಈ ವೇಳೆ ರೋಡ್ ಶೋ ವೇಳೆ ಕೂಡ ಭದ್ರತಾ ಲೋಪ ಕಂಡು ಬಂದಿದೆ.

Also Read  ಮಂಗಳೂರು-ಬೆಂಗಳೂರು ರೈಲು ವೇಳಾಪಟ್ಟಿ ಬದಲಾವಣೆ

 

error: Content is protected !!
Scroll to Top