ರಾಹುಲ್ ದ್ರಾವಿಡ್ ಆರೋಗ್ಯದಲ್ಲಿ ಏರುಪೇರು! ➤ ಆಸ್ಪತ್ರೆಗೆ ದಾಖಲು

ನ್ಯೂಸ್ ಕಡಬ) newskadaba.com, ಕೋಲ್ಕತ್ತಾ, ಜ. 13. ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿತು.

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ. ಆದರೆ ಈ ನಡುವೆ ಟೀಂ ಇಂಡಿಯಾಗೆ ಆತಂಕದ ವಿಚಾರ ಎದುರಾಗಿದೆ. ತಿರುವನಂತಪುರದಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಂಡವನ್ನು ತೋರೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ದ್ರಾವಿಡ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆದ್ದರಿಂದ ಅವರು ಕೋಲ್ಕತ್ತಾದಿಂದ ತಮ್ಮ ಮನೆಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

Also Read  ತಾಲೂಕು ಮಟ್ಟದ ಕ್ರೀಡಾಕೂಟ ► ಸಾಂತೋಮ್ ವಿದ್ಯಾನಿಕೇತನ ವಿದ್ಯಾರ್ಥಿನಿ ಶ್ರಾವ್ಯ.ಬಿ.ಜೆ ಅವರಿಗೆ ಪ್ರಶಸ್ತಿ

ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ರಾಹುಲ್ ಅವರಿಗೆ ಎರಡನೇ ಪಂದ್ಯಕ್ಕೂ ಮುನ್ನ ಹೋಟೆಲ್‌ನಲ್ಲಿ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರಿಗೆ ವೈದ್ಯರ ವ್ಯವಸ್ಥೆಯನ್ನು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಒದಗಿಸಿತ್ತು. ಹೀಗಾಗಿ ರಾಹುಲ್ ಕೊಂಚ ಚೇತರಿಸಿಕೊಂಡರು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಲಿದ್ದು, ವೈದ್ಯರು ಗ್ರೀನ್ ಸಿಗ್ನಲ್ ನೀಡಿದರೆ ಜನವರಿ 15ರಂದು ನಡೆಯಲಿರುವ ಪಂದ್ಯಕ್ಕೆ ಅವರು ತಿರುವನಂತಪುರಕ್ಕೆ ತೆರಳಲಿದ್ದಾರೆ.

error: Content is protected !!
Scroll to Top