ಉಪ್ಪಿನಂಗಡಿ: ಹುಳವಿದ್ದ ಚಿಕನ್‌ ನೀಡಿದ್ದಾರೆಂಬ ಆರೋಪ ! ➤  ಹೊಟೇಲ್ ಗೆ ದಾಳಿ ನಡೆಸಿ ಬೀಗ ಜಡಿದ ಅಧಿಕಾರಿಗಳು                                       

(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ, ಜ.13. ಹುಳವಿದ್ದ ಚಿಕನ್ ಖಾದ್ಯವನ್ನು ಗ್ರಾಹಕರಿಗೆ ನೀಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೆ ದ.ಕ.ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಪುತ್ತೂರು ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಹೊಟೇಲನ್ನು ಮುಚ್ಚಿಸಿದ ಘಟನೆ ವರದಿಯಾಗಿದೆ.

ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಪರಿಸರದಲ್ಲಿನ ಮಾಂಸಾಹಾರಿ ಹೊಟೇಲ್ ಗೆ ದಾಳಿ ನಡೆಸಿ ಪರಿಶೀಲಿಸಿದ ಅಧಿಕಾರಿಗಳ ತಂಡ ಹೊಟೇಲ್ ಗೆ ಬೀಗ ಜಡಿದಿದ್ದಾರೆ. ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ, ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪಗೌಡ, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ರಾಜೇಶ್, ವಿಎ ಮಹೇಶ್,ಕಂದಾಯ ಇಲಾಖಾ ಸಿಬ್ಬಂದಿ ಯತೀಶ್ ಮಡಿವಾಳ್,ಮತ್ತಿತರನ್ನು ಒಳಗೊಂಡ ಅಧಿಕಾರಿಗಳ ತಂಡ ದಾಳಿ ನಡೆಸಿದ್ದರು ಎನ್ನಲಾಗಿದೆ.

Also Read  ಉಪ್ಪಿನಂಗಡಿ: ಪ್ರೀತಿಸಿದರೂ ಮದುವೆಯಾಗಲು ಅಡ್ಡಿಯಾದ ತೀರಾ ಬಡತನ ➤ ಹಿಂದೂ ಯುವತಿಯ ಮದುವೆಗೆ ನೇತೃತ್ವ ನೀಡಿದ ಮುಸ್ಲಿಮರು

 

error: Content is protected !!
Scroll to Top