ತೀವ್ರ ಚಳಿಗೆ ಹೆಚ್ಚಿದ ಮೆದುಳಿನ ಸ್ಟ್ರೋಕ್‌ ಭೀತಿ !   

(ನ್ಯೂಸ್ ಕಡಬ) newskadaba.com  ಉತ್ತರಪ್ರದೇಶ, ಜ.13. ಭಾರೀ ಚಳಿಯಿಂದ ಕಾನ್ಪುರದಲ್ಲಿ ಮೆದುಳಿನ ಪಾರ್ಶ್ವವಾಯು ಮತ್ತು ಮೆದುಳಿನ ರಕ್ತಸ್ರಾವದ ಪ್ರಕರಣಗಳು ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.

ಡಾ.ಸಿ.ಎಸ್ ಅಗರ್ವಾಲ್ ಈ ಕುರಿತು ಮಾತನಾಡಿ, ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಲ್ಲಿ ಮೆದುಳಿನ ಸ್ಟ್ರೋಕ್ ಅಪಾಯವು ಹೆಚ್ಚಾಗುತ್ತದೆ. ಶೀತ ಹೆಚ್ಚಾಗಿ ಸೂರ್ಯನ ಶಾಖ ಕಡಿಮೆಯಿದ್ದರೆ ಅದು ಮೆದುಳಿನ ಸ್ಟ್ರೋಕ್ ಅಪಾಯವನ್ನು ಉಂಟುಮಾಡಬಹುದು. ಆದ್ದರಿಂದ, ತಾಪಮಾನವು ಅತ್ಯಂತ ಕಡಿಮೆ ಇರುವ ಸ್ಥಳಗಳಲ್ಲಿ ಹೆಚ್ಚುವರಿ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.

Also Read  ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ವೃತ್ತಿಪರ ತರಬೇತಿ

ಅಧಿಕ ರಕ್ತದೊತ್ತಡ ಇರುವವರಲ್ಲಿ ಬ್ರೈನ್ ಸ್ಟ್ರೋಕ್ ಮತ್ತು ಮೆದುಳಿನ ರಕ್ತಸ್ರಾವದ ಅಪಾಯ ಚಳಿಗಾಳದಲ್ಲಿ ಹೆಚ್ಚಾಗಿರುತ್ತದೆ ಎಂದು ಹಿರಿಯ ನರರೋಗ ತಜ್ಞರು ತಿಳಿಸಿದ್ದಾರೆ. ಚಳಿಗಾಲದಲ್ಲಿ ಬೆವರುವಿಕೆಯ ಕೊರತೆಯಿಂದಾಗಿ, ದೇಹದಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಾಗುತ್ತದೆ ಇದು ಬಿಪಿ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ.

 

error: Content is protected !!
Scroll to Top