ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾರ್ಯಕಾರಿ ಸಭೆ ಹಾಗೂ ಜನಧ್ವನಿ ಸಮಾವೇಶ ಪೂರ್ವ ಭಾವಿ ಸಭೆ..!

(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ, ಜ.13. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಭೆಯು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿಯವರ ನೇತೃತ್ವದಲ್ಲಿ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಕೆ ಬಿ ರಾಜಾರಾಮ್ ಅವರ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ರೋಟರಿ ಸಭಾಭವನ ರಾಮನಗರದಲ್ಲಿ ನಡೆಯಿತು. ಈ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಜಿ ವೆಂಕಟೇಶ್ ಅವರು ಮಾತನಾಡಿ ಜನವರಿ 22 ರಂದು ಮಂಗಳೂರಲ್ಲಿ ನಡೆಯುವ ಕರ್ನಾಟಕ ಜನಧ್ವನಿ ಸಮಾವೇಶ ಬಗ್ಗೆ ಮಾಹಿತಿ ಹಾಗೂ ಸಲಹೆ,ಸೂಚನೆ ನೀಡಿದರು ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದರು.

ಈ ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ಕರ್ನಾಟಕ ಜನಧ್ವನಿ ಯಾತ್ರೆ ಉಸ್ತುವಾರಿ ಜಿ ವೆಂಕಟೇಶ್. ಜಿಲ್ಲಾಧ್ಯಕ್ಷರಾದ ಕೆ.ಹರೀಶ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಎಮ್ ಎಸ್ ಮುಹಮ್ಮದ್, ಮಂಗಳೂರು ಪಾಲಿಕೆ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಜಿಲ್ಲಾ ಸೇವಾದಳ ಅಧ್ಯಕ್ಷ ಜೋಕಿಮ್ ಡಿಸೋಜ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ,
ಪಕ್ಷದ ಪ್ರಮುಖರಾದ ಭರತ್ ಮುಂಡೋಡಿ, ಎನ್ ಚಂದ್ರಹಾಸ ಶೆಟ್ಟಿ,ಸತೀಶ್ ಕೆಡೆಂಜಿ, ಮೋಹನ್ ಗುರ್ಜಿನಡ್ಕ,ಪ್ರವೀಣ್ ಚಂದ್ರ ಆಳ್ವ, ಮುರಳಿದರ್ ರೈ, ಜಗನ್ನಾಥ ಶೆಟ್ಟಿ ಕೋಡಿಂಬಾಡಿ, ಸುಬ್ರಹ್ಮಣ್ಯ ಗೌಡ, ಯುನಿಕ್ ಅಬ್ದುಲ್ ರಹಿಮಾನ್, ಅಶ್ರಫ್ ಬಸ್ತಿಕರ್, ಜಯಪ್ರಕಾಶ್ ಬದಿನಾರ್, ರಮಾನಾಥ್ ವಿಟ್ಲ, ಶ್ರೀನಿವಾಸ್ ಶೆಟ್ಟಿ ಕೊಲ್ಯ, ನಾರಾಯಣ ಗೌಡ, ಕೇಶವ ಕೊಡಿಪ್ಪಾಡಿ, ಉಲ್ಲಾಸ್ ಕೋಟ್ಯಾನ್, ಫಾರೂಕ್ ಪೆರ್ನೆ,ಪ್ರಹ್ಲಾದ್ ಬೆಳ್ಳಿಪ್ಪಾಡಿ, ಯು ಟಿ ತೌಸೀಫ್,ಸೇಸಪ್ಪ ನೆಕ್ಕಿಲು, ಸಚಿನ್ ರಾಜ್ ಶೆಟ್ಟಿ, ಇಬ್ರಾಹಿಂ ಪುಳಿತ್ತಡಿ, ವೆಂಕಪ್ಪ ಪೂಜಾರಿ, ಶಾಂಭವಿ ಶೆಟ್ಟಿ,ಅಝೀಜ್ ಬಸ್ತಿಕರ್, ಸಿದ್ದಿಕ್ ಕೆಂಪಿ,ಇಸ್ಮಾಯಿಲ್ ಇಕ್ಬಾಲ್, ಪದ್ಮನಾಭ ಪೂಜಾರಿ ಅಳಿಕೆ, ಜಗದೀಶ್ ಶೆಟ್ಟಿ ಅಳಿಕೆ, ಶುಶಾಂತ್ ಶೆಟ್ಟಿ, ನಝೀರ್ ಮಠ, ರಾಮಣ್ಣ ಪಿಲಿಂಜ, ನಫೀಸಾ ಪೆರುವಾಯಿ, ಬೆಬಿ ಗೌಡ ಸೂರ್ಯ, ಅನಿ ಮಿನೇಜಸ್, ಪ್ರತಿಭಾ ಶೆಟ್ಟಿ ಪುನಚ, ಜಯಶೀಲ ಶೆಟ್ಟಿ, ಸುಲೈಮಾನ್ ಸರೋಲಿ, ಕರೀಂ ಕುದ್ದುಪದವು,ವಿ ಕೆ ಎಂ ಅಶ್ರಫ್, ಹಸೈನಾರ್ ನೆಲ್ಲಿಗುಡ್ಡೆ,ರಶೀದ್ ವಿಟ್ಲ, ಮೊಹಮ್ಮದ್ ಬಡಗನ್ನೂರು, ಅಬ್ಬು ನವಗ್ರಾಮ,ರವೀಂದ್ರ ಗೌಡ ಪಟಾರ್ತಿ, ಲೋಕೇಶ್ ಗೌಡ ಪೆಳತ್ತಡಿ, ಸತೀಶ್ ಶೆಟ್ಟಿ ಹೆನ್ನಾಳ ಕಾಂಗ್ರೆಸ್ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು ಎಂದು ವರದಿ ತಿಳಿಸಿದೆ.

Also Read  ಉಪ್ಪಿನಂಗಡಿ: ದಿಶಾರವಿ ಬಂಧನ ವಿರೋಧಿಸಿ NWF ವತಿಯಿಂದ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಪ್ರತಿಭಟನೆ ➤ ಶೀಘ್ರ ಬಿಡುಗಡೆಗೆ ಒತ್ತಾಯಿಸಿ ಉಪತಹಶೀಲ್ದಾರ್ ಮೂಲಕ ಮನವಿ

 

error: Content is protected !!
Scroll to Top