ಆಹಾರ ನಿಗಮದಲ್ಲಿ ಲಂಚ ಹಗರಣ..! ➤  50 ಕಡೆ ಸಿಬಿಐ ದಾಳಿ               

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಜ.12. ಆಹಾರ ಧಾನ್ಯಗಳ ಖರೀದಿ ಮತ್ತು ವಿತರಣೆ ಸಂಬಂಧ ಭಾರತೀಯ ಆಹಾರ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡಗಳು ಪಂಜಾಬ್‌, ಹರಿಯಾಣ ಮತ್ತು ದಿಲ್ಲಿಯ ಒಟ್ಟು 50 ಕಡೆ ದಾಳಿ ನಡೆಸಿವೆ ಎನ್ನಲಾಗಿದೆ. 50 ಸಾವಿರ ರೂ. ಲಂಚ ಪಡೆಯುವ ವೇಳೆ ನಿಗಮದ ಡಿಜಿಎಂ ರಾಜೀವ್‌  ಕುಮಾರ್‌ ಮಿಶ್ರಾ ಅವರು ಸಿಕ್ಕಿಬಿದ್ದ ಪ್ರಕರಣದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಸಿಬಿಐ ಇದುವರೆಗೂ 74 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಚುರುಕುಗೊಳಿಸಿದೆ. ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಹಾಗೂ ಮಿಲ್‌ ಮಾಲೀಕರ ಕಚೇರಿ, ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ 60 ಲಕ್ಷ ರೂ. ನಗದು ಹಾಗೂ ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ಸಿಬಿಐ ತಂಡಗಳು ವಶಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.

Also Read  ರಾಜ್ಯ ಮಟ್ಟದ ಕರಾಟೆ ➤ ಜ್ಞಾನೋದಯ ಬೆಥನಿ ವಿದ್ಯಾರ್ಥಿನಿ ರಕ್ಷಾ ಇವರಿಗೆ ಕಾಪಾದಲ್ಲಿ ಚಿನ್ನದ ಪದಕ

 

error: Content is protected !!
Scroll to Top