ಹೊಸ ಆ್ಯಂಬುಲೆನ್ಸ್ ನೋಂದಾವಣಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ..! ➤  ಹೈಕೋರ್ಟ್’ಗೆ ಸರ್ಕಾರ ಮಾಹಿತಿ           

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.12. ಹೊಸ ಆ್ಯಂಬುಲೆನ್ಸ್ ನೋಂದಾವಣಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು, ವಾಹನ ಸಾಫ್ಟ್ ವೇರ್ ಆ್ಯಂಬುಲೆನ್ಸ್ ಜಿಪಿಎಸ್ ದತ್ತಾಂಶ ಕುರಿತು ನಿರ್ವಹಣೆ ಮಾಡಲಾಗುತ್ತದೆ. ಇನ್ನೂ 108 ಸೇವಾದಾರರನ್ನು ಆಯ್ಕೆ ಮಾಡಲು 21 ದಿನಗಳ ಅಲ್ಪಾವಧಿ ಟೆಂಡರ್ ಕರೆಯಲು ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್’ಗೆ ಮಾಹಿತಿ ನೀಡಿದೆ.

ಬೆಂಗಳೂರಿನ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ಅವರು, ಕರ್ನಾಟಕ ರಸ್ತೆ ಸುರಕ್ಷತೆ ಪ್ರಾಧಿಕಾರದ ಜಂಟಿ ಆಯುಕ್ತ ಜೆ ಪುರುಷೋತ್ತಮ್ ಮತ್ತು ರಾಜ್ಯ ಆರೋಗ್ಯ ಹಾಗೂ ಕಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಉಪ ಕಾರ್ಯದರ್ಶಿ ನಾಗರಾಜ್ ಸಲ್ಲಿಸಿರುವ ಪ್ರತ್ಯೇಕ ಅಫಿಡವಿಡ್‌ಗಳನ್ನು ಪೀಠಕ್ಕೆ ಸಲ್ಲಿಸಿದರು ಎಂದು ವರದಿ ಪ್ರಕಟಣೆ ತಿಳಿಸಿದೆ ಎನ್ನಲಾಗಿದೆ.

Also Read  ಮಂಗಳೂರು ವಿವಿಯಲ್ಲಿ ಕೊರೋನಾ ಮಿತಿಮೀರಿದ ಹಿನ್ನೆಲೆ ➤ ಎ. 03ರ ವರೆಗೆ ತರಗತಿ ಬಂದ್

 

error: Content is protected !!
Scroll to Top