ವಿಐಪಿ ಹಜ್ ಕೋಟಾ ರದ್ದುಗೊಳಿಸಲು ನಿರ್ಧರಿಸಿದ ಸರಕಾರ..! ➤ ಎಲ್ಲಾ ಸೀಟ್ ಗಳು ಕೂಡ ರದ್ದು        

(ನ್ಯೂಸ್ ಕಡಬ) newskadaba.com  ನವದೆಹಲಿ, ಜ.12. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಲ್ಲಿ ಜನರಿಗೆ ಲಭ್ಯವಿದ್ದ ವಿಐಪಿ ಹಜ್ ಕೋಟಾವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ಶೀಘ್ರದಲ್ಲೇ ಹೊಸ ಪರಿಷ್ಕೃತ ಹಜ್ ನೀತಿಯನ್ನು ಸರಕಾರ ಪ್ರಕಟಿಸಲಿದೆ. ವಿಐಪಿ ಹಜ್ ಕೋಟಾದ ಅಡಿಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಮತ್ತು ಹಜ್ ಸಮಿತಿಗೆ ನಿಗದಿಪಡಿಸಿದ ಆಸನಗಳ ಮೂಲಕ ಜನರು ಹಜ್‌ಗೆ ಹೋಗಬಹುದು. ಈಗ ಕೋಟಾವನ್ನು ರದ್ದುಗೊಳಿಸಲಾಗಿದೆ.

ವಿಐಪಿ ಯಾತ್ರಿಕರು ಇನ್ಮುಂದೆ ಸಾಮಾನ್ಯ ಹಜ್ ಯಾತ್ರಿಕರಂತೆ ಪ್ರಯಾಣಿಸಬೇಕಾಗಿದೆ. ಈಗ ಎಲ್ಲಾ ಹಜ್ ಯಾತ್ರಿಕರು ಹಜ್ ಸಮಿತಿ ಮತ್ತು ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಮಾತ್ರ ಹೋಗಬೇಕಿದೆ. ರಾಷ್ಟ್ರಪತಿ ಕೋಟಾದಲ್ಲಿ 100, ಉಪರಾಷ್ಟ್ರಪತಿ ಕೋಟಾದಲ್ಲಿ 75, ಪಿಎಂ ಕೋಟಾದಲ್ಲಿ 75 ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೋಟಾದಲ್ಲಿ 50 ಸೀಟುಗಳು ಇದ್ದವು. ಭಾರತದ ಹಜ್ ಸಮಿತಿಯು 200 ಸ್ಥಾನಗಳನ್ನು ಕೂಡ ತೆಗೆದು ಹಾಕಿದೆ ಎನ್ನಲಾಗಿದೆ.

Also Read  ಭಾರತದ ರಾಷ್ಟ್ರಧ್ವಜ ಮೇಲೆ ಆಟೋಗ್ರಾಫ್ ಹಾಕಿದ ಅಫ್ರಿದಿ ➤ನೆಟ್ಟಿಗರ ಕಿಡಿ

 

 

error: Content is protected !!
Scroll to Top