(ನ್ಯೂಸ್ ಕಡಬ)newskadaba.com ಉತ್ತರಪ್ರದೇಶ, ಜ.11. ಉತ್ತರಾಖಂಡ್ ನ ಜೋಶಿಮಠ ಪ್ರದೇಶದಲ್ಲಿ ಭೂಮಿ ಕುಸಿಯುವ ಭೀತಿ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿಯೂ ಇಂತಹದ್ದೇ ಬೆಳವಣಿಗೆ ಕಂಡು ಬಂದಿದೆ. ಅಲಿಘಡ್ ನ ಕನ್ವರಿಗಂಜ್ ಪ್ರದೇಶದಲ್ಲಿ ಕೆಲವು ಮನೆಗಳಲ್ಲಿ ಹಠಾತ್ ಬಿರುಕುಗಳು ಉಂಟಾಗಿದ್ದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.
ಕಳೆದ ಹಲವು ದಿನಗಳಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು,ಇದರಿಂದ ಭಯಭೀತರಾಗಿದ್ದೇವೆ. ಹೀಗಾಗಿ ನಾವು ನಗರಸಭೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದೇವೆ. ಆದರೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ರಾಕೇಶ್ ಕುಮಾರ್ ಯಾದವ್ ಪ್ರತಿಕ್ರಿಯಿಸಿ ಸಮಸ್ಯೆಯನ್ನು ಅವಲೋಕಿಸಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.