ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಗಂಡ-ಹೆಂಡತಿಯಿಂದ ಲಕ್ಷಾಂತರ ರೂಪಾಯಿ ವಂಚನೆ..!!

Crime

(ನ್ಯೂಸ್ ಕಡಬ)newskadaba.com  ಬೀದರ್, ಜ.11. ಬೀದರ್ ಮೂಲದ ಸಂಜಯ್ ಶಂಭು ಕೊಲ್ಹಾರ್ ಹಾಗೂ ಪ್ರೇರಣಾ ದಂಪತಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 38 ಲಕ್ಷದ 76 ಸಾವಿರ ರೂಪಾಯಿ ಹಣವನ್ನು ಪಡೆದುಕೊಂಡು ವಂಚನೆ ಮಾಡಿದ್ದಾರೆ ಘಟನೆ ಬೆಳಕಿಗೆ ಬಂದಿದೆ.
ಲಿಂಗಸೂಗೂರು ಪಟ್ಟಣದ ನಿವಾಸಿಯಾಗಿರುವ ಸರಳಾಕ್ಷ ಎನ್ನುವವರಿಗೆ ಸಂಬಂಧಿಕರೆಂದು ಸಂಜಯ್ ಶಂಭು ಕೊಲ್ಹಾರ್ ಹಾಗೂ ಪ್ರೇರಣಾ ದಂಪತಿ ಪರಿಚಯವಾಗಿದೆ.

ಸರಳಾಕ್ಷ ಎನ್ನುವವರ ಪತ್ನಿಗೆ ಪ್ರೇರಣಾ ದೂರು ಸಂಬಂಧಿಯಾಗಿದ್ದರು. ಪ್ರೇರಣಾ ಮೂಲಕ ಆತನ ಪತಿ ಸಂಜಯ್ ಶಂಭು ಪರಿಚಯವಾಗಿ ಒಡನಾಟ ಬೆಳೆದು, ಆತ್ಮೀಯರು ಆಗಿದ್ದಾರೆ. ಇದಾದ ಕೆಲ ದಿನಗಳ ನಂತರ ಆರೋಪಿ ಸಂಜಯ್, ಸರಳಾಕ್ಷ ಅವರಿಗೆ ನಾನು ಲೋಕಾಯುಕ್ತ ಇಲಾಖೆಯಲ್ಲಿ ಅಧಿಕಾರಿಯಾಗಿದ್ದೆ, ಈಗ ನಿವೃತ್ತಿ ಪಡೆದುಕೊಂಡಿದ್ದಾನೆ. ನನಗೆ ಗಣ್ಯ ವ್ಯಕ್ತಿಗಳು ಪರಿಚಯವಿದೆ ಎಂದು ಹೇಳಿ, ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ನಂಬಿಸಿದ್ದಾನೆ.

Also Read  ರಾಜ್ಯದಲ್ಲಿ ಮುಂದಿನ ತಿಂಗಳು ಪಿಯು,ಡಿಗ್ರಿ ಕಾಲೇಜು ಓಪನ್.!

 

error: Content is protected !!
Scroll to Top