ಬೈಕ್ ನಿಂದ ಆಯತಪ್ಪಿ ಬಸ್ ಕೆಳಗೆ ಬಿದ್ದು ವಿದ್ಯಾರ್ಥಿ ಮೃತ್ಯು..!!!



(ನ್ಯೂಸ್ ಕಡಬ) newskadaba.com ಬಳ್ಳಾರಿ, ಜ.11.  ಬಿಪಿಎಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬೈಕ್ ನಿಂದ ಆಯತಪ್ಪಿ ಅದೇ ಕಾಲೇಜಿನ ಬಸ್ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿ ವರದಿಯಾಗಿದೆ.





ಮೃತ ವಿದ್ಯಾರ್ಥಿಯನ್ನು ಹನುಮಾನ್ ನಗರದ ಪ್ರಶಾಂತ್ (18) ಎಂದು ಗುರುತಿಸಲಾಗಿದೆ. ಕಾಲೇಜ್ ಮುಗಿದ ನಂತರ ಆತ ಬೈಕ್ ತೆಗೆದುಕೊಂಡು ಹೊರಟಿದ್ದ. ಅನಂತಪುರಂ ರಸ್ತೆಯ ಶಾಂತಿನಿಕೇತನ ಶಾಲೆಯ ಬಳಿ ಹೋಗುವಾಗ ಆಯತಪ್ಪಿ ಬೈಕ್ ನಿಂದ ಬಸ್ ಕೆಳಗೆ ಬಿದ್ದಿದ್ದಾನೆ. ಬಸ್ ಆತನ ತಲೆಯ ಮೇಲೆ ಹರಿದಿದೆ ಎನ್ನಲಾಗಿದೆ. ಘಟನೆಯಿಂದ ಕೆಲ ಹೊತ್ತು ಇಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸಂಚಾರಿ ಪೊಲೀಸರು ಆಗಮಿಸಿದ್ದಾರೆ. ಈ ಬಗ್ಗೆ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ಯುವಕನಿಗೆ ಬೈಕ್ ಚಲಾಯಿಸಲು ಲೈಸೆನ್ಸ್ ಇರಲ್ಲ. ಕಾರಣ ಆತನಿಗೆ ಇನ್ನು 18 ವರ್ಷ ತುಂಬಿರಲಿಲ್ಲ.






error: Content is protected !!
Scroll to Top