ಜನರ ಕಣ್ಣೆದುರೇ ಕಾನ್‌ಸ್ಟೆಬಲ್‌ನನ್ನು ಇರಿದು ಕೊಂದ ಕಳ್ಳ…!

Crime

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜ.11. ನಡುರಸ್ತೆಯಲ್ಲಿ ಎಲ್ಲರ ಕಣ್ಣೆದುರೇ ಕಳ್ಳನಿಂದ ಇರಿತಕ್ಕೆ ಒಳಗಾದ ಪೊಲೀಸ್ ಅಧಿಕಾರಿ ಮೃತಪಟ್ಟ ಘಟನೆ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ. ಮೊಬೈಲ್ ಫೋನ್ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಹಿಡಿದಿದ್ದರು. ಆದರೆ ಕಳ್ಳ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ 12 ಬಾರಿ ಅವರಿಗೆ ಚಾಕುವಿನಿಂದ ಇರಿದಿದ್ದಾನೆ.

ಇಷ್ಟೆಲ್ಲಾ ನಡೆದರೂ ಜನರ ಗುಂಪು ಮೂಕ ಪ್ರೇಕ್ಷಕರಾಗಿತ್ತೇ ವಿನಾ, ಕಳ್ಳನ ಆಕ್ರಮಣದಿಂದ ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸುವ ಗೋಜಿಗೆ ಹೋಗಲಿಲ್ಲ. ದಾಳಿಕೋರನನ್ನು ತಡೆಯುವ ಅಥವಾ ಅವನನ್ನು ಹಿಡಿಯುವ ಪೊಲೀಸ್ ಪ್ರಯತ್ನಕ್ಕೆ ಸಹಾಯ ಮಾಡದ ಜನರ ಮುಂದೆಯೇ ಆತ ಪದೇ ಪದೇ ಇರಿದಿದ್ದಾನೆ ಎನ್ನಲಾಗಿದೆ.

Also Read  ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ ಬಂಗ್ಷಿ ಸಮುದಾಯದ ಜನರು.!*   ➤ ಪೊಲೀಸ್ ಠಾಣೆಗೆ ಬೆಂಕಿ.!  

 

error: Content is protected !!
Scroll to Top