(ನ್ಯೂಸ್ ಕಡಬ)newskadaba.com ಹೈದರಾಬಾದ್, ಜ.11. ದೇಶದಲ್ಲಿ ಐಟಿ-ಬಿಟಿ, ಸ್ಟಾರ್ಟ್ ಅಪ್, ಶ್ರೀಮಂತಿಕೆ, ಉದ್ಯಮಗಳ ಬೆಳವಣಿಗೆ, ಜಿಎಸ್‌ಟಿ ಪಾವತಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ವೇಶ್ಯಾವಾಟಿಕೆಯಲ್ಲಿಯೂ ಮುಂಚೂಣಿಯಲ್ಲಿದೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ. ಆಧುನಿಕ ಸಮಾಜ ಬೆಳೆದಂತೆ ಅಪರಾಧ ಕೃತ್ಯ, ವೇಶ್ಯಾವಾಟಿಕೆ ಮತ್ತು ಮೋಸದ ಪ್ರಕರಣಗಳೂ ಹೆಚ್ಚಾಗುತ್ತಿವೆ.
ದೇಶದಲ್ಲಿ ವಿವಿಧ ಕ್ಷೇತ್ರಗಳ ಬೆಳವಣಿಗೆಯನ್ನು ಅಧ್ಯಯನ ಮಾಡುವ ಸಂಸ್ಥೆಗಳು, ಈಗ ವೇಶ್ಯಾವಾಟಿಕೆ ನಡೆಯುವ ಬಗ್ಗೆಯೂ ಸಮೀಕ್ಷೆಯನ್ನು ಮಾಡಿ ಬಹರಂಗಪಡಿಸಿವೆ. ಈ ವೇಳೆ ವೇಶ್ಯಾವಾಟಿಕೆ ನಡೆದ ಘಟನೆಗಳು, ಪೊಲೀಸರು ದಾಳಿ ಮಾಡಿರುವುದು, ಅಲ್ಲಿ ಸಿಕ್ಕಿರುವ ಯುವತಿಯರು, ಆರೋಪಿಗಳು ಹಾಗೂ ದಂಧೆಯಲ್ಲಿ ಪಾಲ್ಗೊಂಡಿದ್ದ ಜಾಲದ ಬಗ್ಗೆ ಪೊಲೀಸರು ನೀಡುವ ಮಾಹಿತಿಯನ್ನೂ ಕೂಡ ಸಮೀಕ್ಷೆಗೆ ಪರಿಗಣಿಸಲಾಗುತ್ತದೆ. ಜೊತೆಗೆ, ಆನ್‌ಲೈನ್‌ನಲ್ಲಿ ವೇಶ್ಯಾವಾಟಿಕೆಗೆ ಇರುವ ಪೂರಕ ಅಂಶಗಳನ್ನು ಇಲ್ಲಿ ಪರಿಗಣಿಸಲಾಗುತ್ತದೆ ಎಂದು ತಿಳಿದುಬಂದಿದೆ.