ಹಜ್ ಗೆ ನಿರ್ಬಂಧಿಸಿದ್ದ ಎಲ್ಲಾ ನಿಯಮಗಳಿಗೆ ಸಡಿಲಿಕೆ.!

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಜ.11. ಕೊರೊನಾ ಸೋಂಕಿನ ಭೀತಿಯಿಂದ ಹಲವು ನಿರ್ಬಂಧಗಳಿಗೆ ಒಳಗಾಗಿದ್ದ ಸೌದಿ ಅರೇಬಿಯಾ ವಾರ್ಷಿಕ ಹಜ್ ಯಾತ್ರೆ ಈ ಬಾರಿ ಸರಾಗವಾಗಿ ಸಡೆಯಲಿದ್ದು, ಕೊರೊನಾ ಪೂರ್ವ ಸ್ಥಿತಿಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.


2021 ರಲ್ಲಿ ಸೌದಿ ಅರೇಬಿಯಾದ 60 ಸಾವಿರ ನಿವಾಸಿಗಳು ಯಾತ್ರೆ ಮಾಡಿದ್ದರೆ, ಕಳೆದ ವರ್ಷ 10 ಲಕ್ಷ ಮಂದಿ ಮೆಕ್ಕಾಗೆ ಆಗಮಿಸಿದ್ದರು. ಈ ಬಾರಿ ಎಲ್ಲ ನಿರ್ಬಂಧಗಳನ್ನೂ ತೆರವುಗೊಳಿಸಲಾಗಿದೆ. ಜೊತೆಗೆ ವಯಸ್ಸಿನ ಮಿತಿಯಿಲ್ಲದೇ ಕೊರೊನಾ ಪೂರ್ವದಂತೆ ಈ ವರ್ಷ ಹಜ್ ಯಾತ್ರೆ ಜರಗಲಿದೆ ಎಂದು ಉಮ್ರಾ ಸಚಿವ ತೌಫೀಕ್ ಅಲ್ ರಬಿಯಾ ಹೇಳಿದ್ದಾರೆ.

Also Read  ಕರಾವಳಿಯಲ್ಲಿ ಮುಂದುವರಿದ ಭಾರಿ ಮಳೆ ➤ ಕಡಲಿನ ಅಬ್ಬರ ಹೆಚ್ಚಳ, ಆತಂಕದಲ್ಲಿ ಜನ

error: Content is protected !!
Scroll to Top