ಕಾಡಾನೆ ದಾಳಿ ➤ ರಾಗಿ ಫಸಲು, ತೆಂಗಿನ ಮರಗಳು ನಾಶ

(ನ್ಯೂಸ್ ಕಡಬ) newskadaba.com ಕನಕಪುರ, ಜ.11.  ಕಾಡಾನೆಗಳ ಗುಂಪೊಂದು ರಾಗಿ ಫಸಲು ಹಾಗೂ ತೆಂಗಿನ ಮರಗಳನ್ನು ಸಂಪೂರ್ಣವಾಗಿ ನಾಶಪಡಿಸಿರುವ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿ ಹುಣಸನಹಳ್ಳಿ ಸಮೀಪದ ಚಿಕ್ಕಮುಕ್ಕೋಡ್ಲು ಗ್ರಾಮದಲ್ಲಿ ವರದಿಯಾಗಿದೆ.

ಚಿಕ್ಕಮುಕ್ಕೋಡ್ಲು ಗ್ರಾಮದಲ್ಲಿ 5 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ರಾಗಿ ಫಸಲುನ್ನು ತುಳಿದಾಡಿ ನಾಶ ಮಾಡಿವೆ ಎನ್ನಲಾಗಿದೆ. ಆನೆಗಳ ನಿರಂತರ ದಾಳಿಯಿಂದ ರೈತರು ಕಂಗಲಾಗಿದ್ದಾರೆ. ಕಾಡಾನೆ ತಡೆಗೆ ರೈತರು ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆನೆಗಳು ಮಾತ್ರ ತಮ್ಮ ದಾಳಿಯನ್ನು ಮುಂದುವರೆಸುತ್ತಿವೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

Also Read  ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ; ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

error: Content is protected !!
Scroll to Top