ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದ ಬಳಿ 15ನೇ ಶತಮಾನದ 3 ಸ್ಮಶಾನ ಪತ್ತೆ..!       

(ನ್ಯೂಸ್ ಕಡಬ)newskadaba.com  ಮೈಸೂರು, ಜ.11. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ವಿ.ಶೋಭಾ ನೇತೃತ್ವದ ಸಂಶೋಧನಾ ತಂಡವು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಬೆಟ್ಟಗಳಲ್ಲಿ ಇತಿಹಾಸ ಪೂರ್ವ ಸ್ಮಶಾನಗಳನ್ನು ಪತ್ತೆ ಹಚ್ಚಿದೆ ಎನ್ನಲಾಗಿದೆ.

ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಚಾಮರಾಜನಗರ ತಾಲೂಕಿನ ಭೂದಿಪಡಗ ಗ್ರಾಮದಲ್ಲಿ ಸಂಶೋಧನಾ ತಂಡವು ಮೂರು ಸ್ಮಶಾನಗಳನ್ನು ಪತ್ತೆ ಮಾಡಿದೆ. ಇವು ಕ್ರಿಸ್ತ ಪೂರ್ವ 15ನೇ ಶತಮಾನದವೆಂದು ನಂಬಲಾಗಿದೆ. ಪುರಾತತ್ವ ತಜ್ಞರು ಗತಕಾಲದ ಹೆಚ್ಚಿನ ಅವಶೇಷಗಳನ್ನು ಕಂಡುಹಿಡಿಯಲು ಈ ಪ್ರದೇಶದಲ್ಲಿ ಉತ್ಖನನ ಮಾಡುತ್ತಿದ್ದಾರೆ. ಈ  ಮೂರು ಸ್ಮಶಾನಗಳು ಬೆಟ್ಟಗಳ ಮೇಲಿನ ಕೃಷಿ ಭೂಮಿಯಿಂದ ಸುಮಾರು 300 ಮೀಟರ್ ದೂರದಲ್ಲಿ ಕಂಡು ಬಂದಿವೆ.

Also Read  ಡ್ರೈವಿಂಗ್ ವೇಳೆ ಹೃದಯಾಘಾತ- ಲಾರಿ ಚಾಲಕ ಮೃತ್ಯು

ಈ ಪ್ರದೇಶದಲ್ಲಿ ಸಂಶೋಧನಾ ತಂಡಕ್ಕೆ ಮಡಕೆಗಳ ಮುರಿದ ತುಂಡುಗಳು ಮತ್ತು ಕಲ್ಲಿನ ಕೆತ್ತನೆಗಳು ಸಿಕ್ಕಿವೆ. ಈ ಸ್ಥಳದಲ್ಲಿ ಅತಿದೊಡ್ಡ ಸಮಾಧಿ 9 ಮೀಟರ್ ಅಳತೆ ಮತ್ತು 4.5 ಮೀಟರ್ ನ ಅತಿ ಚಿಕ್ಕ ಸಮಾಧಿ ಸಿಕ್ಕಿದೆ.

 

 

 

error: Content is protected !!
Scroll to Top