ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಮೃತ್ಯು, ಹಲವರು ಅಸ್ವಸ್ಥ..!!

(ನ್ಯೂಸ್ ಕಡಬ) newskadaba.com ವಿಜಯನಗರ, ಜ.11.  ಕಲುಷಿತ ನೀರು ಸೇವಿಸಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟ, ಹಾಗೂ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆಯ ರಾಣಿಪೇಟೆಯಲ್ಲಿ ಬುಧವಾರದಂದು ವರದಿಯಾಗಿದೆ.

ಮೃತ ಮಹಿಳೆಯನ್ನುರಾಣಿಪೇಟೆ ನಿವಾಸಿ ಲಕ್ಷ್ಮೀ (55) ಎಂದು ಗುರುತಿಸಲಾಗಿದೆ. ಚಲವಾದಿ ಕೇರಿ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ನೀರು ಕಲುಷಿತಗೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ನಡುವೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಅಸ್ವಸ್ಥರಾಗಿರುವವರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Also Read  ರೀಲ್ಸ್ ಗಾಗಿ ರಸ್ತೆಯಲ್ಲಿ ಯುವಕನ ಹುಚ್ಚಾಟ - ಆರೋಪಿ ಅರೆಸ್ಟ್

error: Content is protected !!
Scroll to Top