ಉಪ್ಪಿನಂಗಡಿ: ಗ್ರಾಹಕರ ಸೋಗಿನಲ್ಲಿ ಬಂದು ಪರ್ಸ್ ಕದ್ದು ವ್ಯಕ್ತಿ ಪರಾರಿ..!!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 11:   ಗ್ರಾಹಕ ಸೋಗಿನಲ್ಲಿ ಬಂದ ಕ್ಯಾಶ್ ಕೌಂಟರ್ ನಲ್ಲಿದ್ದ 7500 ರೂಪಾಯಿ ಹಾಗೂ ದಾಖಲೆಪತ್ರಗಳಿದ್ದ ಪರ್ಸ್ ನ್ನು ಎರಗಿದ ಘಟನೆ ಉಪ್ಪಿನಂಗಡಿಯ ಬಳಿ ವರದಿಯಾಗಿದೆ.

ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಲ್ಲಿನ ಮಡಿಕೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗೆ ಬಂದ ಸುಮಾರು 60ರ ವಯೋಮಾನದ ವ್ಯಕ್ತಿ ಹತ್ತು ರೂಪಾಯಿ ಮೌಲ್ಯದ ಪಾನೀಯವನ್ನು ಖರೀದಿಸಿ, ಅಂಗಡಿ ಮಾಲಕ ಅನ್ಯ ಗ್ರಾಹಕರೊಂದಿಗೆ ವ್ಯವಹರಿಸುತ್ತಿರುವ ವೇಳೆ ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿದ್ದ ಪರ್ಸನ್ನೇ ಎಗರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. 7500 ರೂ ನಗದು ಹಾಗೂ ಇನ್ನಿತರ ಪ್ರಮುಖ ದಾಖಲೆ ಪತ್ರಗಳಿದ್ದ ಪರ್ಸನ್ನು ಎರಗಿಸಿದ ಕಳ್ಳ ಆಟೋ ರಿಕ್ಷಾವೊಂದರಲ್ಲಿ ನೆಕ್ಕಿಲಾಡಿವರೆಗೆ ಪ್ರಯಾಣಿಸಿ ಅಲ್ಲಿಂದ ಮರೆಯಾಗಿರುತ್ತಾನೆ ಎನ್ನಲಾಗಿದೆ.

Also Read  ಪ್ರತ್ಯೇಕ 5 ಕಳವು ಪ್ರಕರಣ ಭೇದಿಸಿದ ಕೊಡಗು ಪೊಲೀಸರು

error: Content is protected !!
Scroll to Top