ಮೇಕೆದಾಟು ಯೋಜನೆ..!  ➤  ಸುಪ್ರೀಂಕೋರ್ಟ್ ಆದೇಶದಂತೆ ನಡೆಯುತ್ತೇವೆಂದ ಕಾವೇರಿ ಪ್ರಾಧಿಕಾರ

(ನ್ಯೂಸ್ ಕಡಬ)newskadaba.com  ಕಾರೈಕಲ್, ಜ.11. ಮೇಕೆದಾಟು ಯೋಜನೆ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ನಡೆಯುತ್ತೇವೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಹೇಳಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತಂಡವು ಪುದುಚೇರಿ ಮತ್ತು ತಮಿಳುನಾಡಿನ ಪಿಡಬ್ಲ್ಯೂಡಿ ಅಧಿಕಾರಿಗಳ ಜೊತೆಯಲ್ಲಿ ಕಾರೈಕಲ್ ಮತ್ತು ತಮಿಳುನಾಡು ನಡುವಿನ ಗಡಿಯಲ್ಲಿರುವ ನದಿಗಳ ಕೇಂದ್ರ ಜಲ ಆಯೋಗದ ಗೇಜಿಂಗ್ ಸ್ಟೇಷನ್‌ ಮತ್ತು ಇತರೆ ಪ್ರದೇಶಗಳನ್ನು ಪರಿಶೀಲನೆ ನಡೆಸಿತು ಎನ್ನಲಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸೌಮಿತ್ರ ಕುಮಾರ್ ಹಾಲ್ದಾರ್ ಅವರು,ಕರ್ನಾಟಕ ಸರ್ಕಾರವು ಅಣೆಕಟ್ಟು ನಿರ್ಮಿಸಲು ಪ್ರಸ್ತಾಪವನ್ನು ಮುಂದಿಟ್ಟಿದೆ. ತಮಿಳುನಾಡು ಸರ್ಕಾರವು ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಹೀಗಾಗಿ ಸುಪ್ರೀಂಕೋರ್ಟ್ ನೀಡುವ ಆದೇಶದಂತೆ ನಡೆಯಲು ನಾವು ನಿರ್ಧರಿಸಿದ್ದೇವೆ. ಒಂದು ವೇಳೆ ಸುಪ್ರೀಂಕೋರ್ಟ್ ನಿರ್ಧಾರ ನಮ್ಮ ಕೈಗೆ ನೀಡಿದ್ದೇ ಆದರೆ, ನಾವು ಈ ಬಗ್ಗೆ ಚರ್ಚೆ ನಡೆಸುತ್ತೇವೆಂದು ಹೇಳಿದ್ದಾರೆ.

Also Read  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ

sup

 

 

error: Content is protected !!
Scroll to Top