ಮನೆಯಲ್ಲಿದ್ದ ಡಬಲ್ ಸಿಲಿಂಡರ್ ಸ್ಫೋಟ..! ➤  ಮೂವರು ಪ್ರಾಣಾಪಾಯದಿಂದ ಪಾರು  

(ನ್ಯೂಸ್ ಕಡಬ) newskadaba.com  ಹಾಸನ, ಜ.11. ಮನೆಯ ಒಳಗೆ ಮತ್ತು ಹೊರಗೆ ಇದ್ದ ಎರಡು ಅಡುಗೆ ಗ್ಯಾಸ್ ಸಿಲಿಂಡರ್ ಗಳು ಸ್ಫೋಟಗೊಂಡು ಮೂವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾಸನದಲ್ಲಿ ವರದಿಯಾಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಈ ದುರ್ಘಟನೆ ನಡೆದಿದ್ದು, ವಾಸದ ಮನೆಯ ಹೊರಗೆ ಮತ್ತು ಒಳಗೆ ಇದ್ದ ಎರಡು ಗ್ಯಾಸ್‌ ಸಿಲಿಂಡರ್‌ಗಳು ಕೆಲವೇ ನಿಮಿಷಗಳ ಅಂತರದಲ್ಲಿ ಸ್ಫೋಟಗೊಂಡು ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯಲ್ಲಿ ಮೂವರು ವಾಸವಾಗಿದ್ದು ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.

Also Read  ಧರ್ಮಸ್ಥಳ: ಡಿಕೆಶಿ ಹೆಲಿಕಾಪ್ಟರ್ ಧಿಡೀರ್ ತಪಾಸಣೆ

 

error: Content is protected !!
Scroll to Top