ಹುಬ್ಬಳ್ಳಿಗೆ ನಾಳೆ  ಪ್ರಧಾನಿ ನರೇಂದ್ರ ಮೋದಿ  ➤  ಯುವಜನ ಉತ್ಸವಕ್ಕೆ ಚಾಲನೆ 

(ನ್ಯೂಸ್ ಕಡಬ) newskadaba.com  ಹುಬ್ಬಳ್ಳಿ, ಜ.11. ಧಾರವಾಡದಲ್ಲಿ ಜ.12ರಿಂದ 16ರ ವರೆಗೆ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದ್ದು, 12ಕ್ಕೆ ಪ್ರಧಾನಿ ಮೋದಿ ಇಲ್ಲಿನ ರೈಲ್ವೆ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಈ ಭಾಗದ ಯುವಕರಿಗೆ ಪ್ರೇರಣೆ ನೀಡುವ ಜನೋತ್ಸವ ಇದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು ಎನ್ನಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿ, ಯುವ ಜನೋತ್ಸವದಲ್ಲಿ 28 ರಾಜ್ಯಗಳಿಂದ ಯುವಕರ ತಂಡ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿನಿಧಿಗಳು ಬರುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಒಂದು ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನ ಮೇಳ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವುದು ನಮಗೆಲ್ಲ ಸಂತಸವನ್ನುಂಟು ಮಾಡಿದೆ. ಎಲ್ಲ ರಂಗದಲ್ಲಿ ಯುವಕರು ಮುಂದೆ ಬರಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.

Also Read  ಮೆಡಿಕಲ್ ಶಾಪ್ ನಲ್ಲಿ ಅಮಲು ಮಾತ್ರೆಗಳು ಪತ್ತೆ ➤ ಇಬ್ಬರು ಆರೋಪಿಗಳ ಬಂಧನ

 

error: Content is protected !!
Scroll to Top