ರಾಷ್ಟ್ರಗೀತೆ ವೇಳೆ ಪ್ಯಾಂಟ್ ನಲ್ಲೇ ಮೂತ್ರ ಮಾಡಿದ ಸುಡಾನ್ ಅಧ್ಯಕ್ಷ ➤  ವಿಡಿಯೋ ಮಾಡಿದ್ದ 6 ಪತ್ರಕರ್ತರ ಬಂಧನ            

(ನ್ಯೂಸ್ ಕಡಬ) newskadaba.com  ದಕ್ಷಿಣ ಸುಡಾನ್​, ಜ.11. ಅಧ್ಯಕ್ಷರೋರ್ವರು ತಮ್ಮ ಪ್ಯಾಂಟ್​ನಲ್ಲಿ ಮೂತ್ರ ಮಾಡಿಕೊಂಡ ವಿಡಿಯೋ ವೈರಲ್​ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರು ಜನ ಪತ್ರಕರ್ತರನ್ನು ಬಂಧಿಸಲಾಗಿದೆ. ದಕ್ಷಿಣ ಸುಡಾನ್​ ಅಧ್ಯಕ್ಷ ಸಲ್ವಾ ಕಿರ್​(79) ರಸ್ತೆ ಕಾಮಗಾರಿ ಉದ್ಘಾಟಣೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ರಾಷ್ಟ್ರಗೀತೆ ಹಾಡುತ್ತಿದ್ದಾಗಲೇ ಪ್ಯಾಂಟ್​ನಲ್ಲಿ ಮೂತ್ರ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು ಎನ್ನಲಾಗಿದೆ.

ಸಾರ್ವಜನಿಕವಾಗಿ ರಾಷ್ಟ್ರಗೀತೆ ಹಾಡುವ ವೇಳೆಯೇ ಅವರ ಪ್ಯಾಂಟ್​ ಒದ್ದೆಯಾಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಇದು ಕಿರ್​ ಅವರ ಗಮನಕ್ಕೂ ಬಂದಿದೆ. ಅಲ್ಲದೇ, ಸುತ್ತಲಿದ್ದ ಜನರೂ ಕೂಡ ಇದನ್ನು ಗಮನಿಸುತ್ತಿರುವುದುವುದಾಗಿ ವರದಿಯಾಗಿದೆ. ಈ ದೃಶ್ಯವನ್ನು ಸೆರೆಹಿಡಿದಿದ್ದ ಎಸ್​ಎಸ್​ಬಿಸಿ ಪ್ರಸಾರ ಮಾಡದಿದ್ದರೂ, ಈ ದೃಶ್ಯ ಬಹಿರಂಗವಾಗಿದೆ. ಈ ಹಿನ್ನೆಲೆ ಎಸ್​ಎಸ್​ಬಿಸಿಯ ಪತ್ರಕರ್ತರಾದ ಜಾಕೋಬ್ ಬೆಂಜಮಿನ್, ಮುಸ್ತಫಾ ಓಸ್ಮಾನ್, ವಿಕ್ಟರ್ ಲಾಡೋ, ಜೋವಲ್ ಟೊಂಬೆ, ಚೆರ್ಬೆಕ್ ರೂಬೆನ್ ಮತ್ತು ಜೋಸೆಫ್ ಆಲಿವರ್​ರನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಮೊಬೈಲ್ ಕೊಡಿಸಲಿಲ್ಲವೆಂದು ಆತ್ಮಹತ್ಯೆಗೈದ ಬಾಲಕ

 

error: Content is protected !!
Scroll to Top