ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಮೃತ್ಯು ➤  40 ಕ್ಕೂ ಹೆಚ್ಚು ಜನರು ಅಸ್ವಸ್ಥ             

(ನ್ಯೂಸ್ ಕಡಬ) newskadaba.com  ವಿಜಯನಗರ, ಜ.11. ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿ, ಹಲವರು ಅಸ್ವಸ್ಥರಾದ ಘಟನೆ ವಿಜಯನಗರದಲ್ಲಿ ವರದಿಯಾಗಿದೆ. ಮೃತರನ್ನು ನಗರದ ರಾಣಿಪೇಟೆಯ ನಿವಾಸಿ ಲಕ್ಷ್ಮೀ (55) ಎಂದು ಗುರುತಿಸಲಾಗಿದೆ.

ಹೊಸಪೇಟೆ ನಗರದ ರಾಣಿಪೇಟೆ, ಚಲುವಾದಿಕೇರಿ ಸೇರಿದಂತೆ ನಾನಾ ಕಡೆ ಕುಡಿವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರಿಂದ ನೀರು ಕಲುಷಿತಗೊಂಡಿದೆ ಅಂತ ಸ್ಥಳೀಯರು ಹೇಳಿದ್ದಾರೆ. 40 ಕ್ಕೂ ಹೆಚ್ಚು ಜನರು ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದಾರೆಂದು ತಿಳಿದು ಬಂದಿದೆ.  ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರು ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಮನೆಗಳಿಗೆ ತೆರಳಿದ್ದಾರೆ. ಪೈಪ್ ಲೈನ್ ಕಾಮಗಾರಿ ನಡೆಯುವ ವೇಳೆ ನೀರು ಕಲುಷಿತಗೊಂಡಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ.

Also Read  ದೇವರಿಗೆ ತನ್ನ "ಈ" ಅಂಗವನ್ನೇ ಅರ್ಪಿಸಿದ.!

 

error: Content is protected !!
Scroll to Top