ನಾನು ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ಕಳೆದುಕೊಂಡೆ… ➤ ಮೆಟ್ರೋ ಪಿಲ್ಲರ್ ಕುಸಿತದಲ್ಲಿ ಮೃತ ಮಹಿಳೆಯ ಪತಿಯ ಭಾವುಕ ಮಾತುಗಳು      

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.11. ಬೆಂಗಳೂರಿನ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದ ಪರಿಣಾಮ ಮಹಿಳೆ ಹಾಗೂ ಮಗು ಮೃತಪಟ್ಟಿದ್ದು, ಈ ಕುರಿತು ಮಹಿಳೆಯ ಪತಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಮಹಿಳೆಯ ಪತಿ ಲೋಹಿತ್ ಮಾತನಾಡಿ, ಈ ಘಟನೆಯಲ್ಲಿ ನಾನು ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನನ್ನ ಜಗತ್ತು ಕಳಚಿ ಬಿದ್ದಿದೆ ಎಂದು ಹೇಳಿದ್ದಾರೆ.

ನಾವು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆವು, ಈ ಘಟನೆಯು ಕ್ಷಣಾರ್ಧದಲ್ಲಿ ಸಂಭವಿಸಿತು. ಮೆಟ್ರೋ ಫಿಲ್ಲರ್‌ ಕುಸಿದು ನಾನು ನೋಡುತ್ತಿದ್ದಂತೆ ನನ್ನ ಹೆಂಡತಿ ಮತ್ತು ಮಗು ಮೇಲೆ ಬಿದ್ದಿದೆ.ನಾನು ಅಸಹಾಯಕನಾದೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ.ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.

Also Read  ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ ➤  ಮೂವರು ವಶಕ್ಕೆ

 

error: Content is protected !!
Scroll to Top