ಜಿ.ಎಂ.ಎಸ್ ಅಕಾಡೆಮಿಯಲ್ಲಿ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ದಾವಣಗೆರೆ, ಜ. 11.   “ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಲಯನ್ಸ್ ಕ್ಲಬ್” ಸಹಯೋಗದ ರಕ್ತದಾನ ಶಿಬಿರವನ್ನು ದಾವಣಗೆರೆಯ ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಡಾ. ಎಂ. ಕೆ. ಭಟ್,  ಶ್ರೀಮತಿ ಪ್ರಭಾ ರವೀಂದ್ರ  ಬೆಳ್ಳೋಡಿ ಶಿವಕುಮಾರ್,  ಗೌಡ್ರ ಚನ್ನಬಸಪ್ಪ, ಆನಂದ ಜ್ಯೋತಿ, ಡಾ. ಎ. ಎಮ್ ಶಿವಕುಮಾರ್ ಮುಂತಾದ ಗಣ್ಯರು ಉಪಸ್ಥಿತಿ ಇದ್ದರು ಎನ್ನಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಜಿ.ಎಂ.ಎಸ್ ಅಕಾಡೆಮಿ ಪ್ರಾಚಾರ್ಯರಾದ  ಶ್ವೇತಾ ಮರಿಗೌಡರ್  “ರಕ್ತದಾನ ಜೀವದಾನ” ಎನ್ನುವ ವಾಕ್ಯದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಜೀವದಾನ ಮಾಡಲು ಕರೆಕೊಟ್ಟರು.  ಮಂಜುನಾಥ್ ಬಿ., ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳು, ಡಾ. ಬಿ. ಆರ್ ಹರೀಶ್, ರೆಡ್ ಕ್ರಾಸ್ ಸಂಯೋಜನಾಧಿಕಾರಿಗಳು, ಜಿ.ಎಂ.ಐ.ಪಿ.ಎಸ್.ಆರ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

Also Read  ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಪೋಸ್ಟ್ ಕಾರ್ಡ್ ಮೂಲಕ ಗೌರವ

error: Content is protected !!
Scroll to Top