ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲ್ಯಾಘನೀಯ

(ನ್ಯೂಸ್ ಕಡಬ)newskadaba.com  ಧರ್ಮಸ್ಥಳ, ಜ.10. ಆಂತರಿಕ ಮತ್ತು ಬಾಹ್ಯ ಸ್ವಚ್ಛತೆ ಇದ್ದಾಗ ಪರಮಾತ್ಮಾನನ್ನು ಓಲಿಸಿಕೊಳ್ಳುವುದು ಸುಲಭ ಸಾಧ್ಯ. ಆರೋಗ್ಯ ದೃಷ್ಠಿಯಿಂದಲೂ ಒಳಿತು ಇಂತಹ ಸಾಮಾಜಿಕ ಜಾಗೃತಿ ಕಾರ್ಯದಿಂದ ಸಮಾಜದಲ್ಲಿ ಸಂಸ್ಥೆ ಪ್ರಸಂಶನೀಯವಾಗಿದೆ ಎಂದು ಜಿಲ್ಲಾ ನಿರ್ದೇಶಕ ಯೋಗೀಶ.ಎ ಅಭಿಪ್ರಾಯಪಟ್ಟರು.


ಅವರು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶಿರಹಟ್ಟಿ ಪಟ್ಟಣದಖಾನಾಪುರ ಗ್ರಾಮದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.


ಮನುಷ್ಯ ಬಾಹ್ಯವಾಗಿ ಸ್ವಚ್ಛತೆ ಇರಬೇಕಾದರೆ ಮನೆ, ಶ್ರದ್ಧಾಕೇಂದ್ರ, ವಠಾರ, ಕಾಲುವೆ ಮತ್ತು ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರಬೇಕು. ಮತ್ತು ಮನ ಸ್ವಚ್ಛತೆ ಇರಬೇಕಾದರೆ ಜ್ಞಾನ, ಯೋಗ, ಪ್ರಾರ್ಥನೆ ಮತ್ತು ಏಕಾಗ್ರತೆಗಳಲ್ಲಿ ತೊಡಗಿದಾಗ ಮಾತ್ರ ಮನ ಸ್ವಚ್ಛತೆವಾಗುತ್ತದೆ, ಈ ಎರಡು ಸ್ವಚ್ಚತೆಯನ್ನು ಮಾಡಲೇಂದೆ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗದಗ ಜಿಲ್ಲೆಯಲ್ಲಿ 493 ಶ್ರದ್ಧಾಕೇಂದ್ರಗಳ ಸ್ವಚ್ಛತೆಯನ್ನು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೇವಾಕಾರ್ಯ ಜರುಗುತ್ತಿದೆ ಎಂದು ಹೇಳಿದರು.

Also Read  ಸಬಳೂರು: ಶ್ರೀ ರಾಮ ಭಜನಾ ಮಂದಿರ ► ದೀಪಾವಳಿ ಸಂಭ್ರಮ, ಸಾಮೂಹಿಕ ಗೋಪೂಜೆ

 

 

error: Content is protected !!
Scroll to Top