ಹಿರಿಯ ಸಾಹಿತಿ ಡಾ. ಸಾರಾ ಅಬೂಬಕ್ಕರ್ ನಿಧನ..!!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 10.  ಹಿರಿಯ ಸಾಹಿತಿ , ಲೇಖಕಿ ಡಾ.ಸಾರಾ ಅಬೂಬಕ್ಕರ್ ಅವರು ಮಂಗಳವಾರದಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ವರದಿಯಾಗಿದೆ.

ಇವರಿಗೆ (87) ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಮೃತರು ನಾಲ್ವರು ಪುತ್ರರು ಹಾಗೂ ಅಪಾರ ಬಂಧುಬಳಗದವರನ್ನು ಆಗಲಿದ್ದಾರೆ.

ಮುಲತಃ ಕಾಸರಗೋಡಿನ ಚಂದ್ರಗಿರಿ ತೀರವರಾದ ಸಾರಾ ಅಬೂಬಕ್ಕರ್ ವಿವಾಹವಾದ ಬಳಿಕ ಮಂಗಳೂರಿನ ಹ್ಯಾಟ್ ಹಿಲ್ ಬಳಿ ವಾಸವಾಗಿದ್ದರು. ಚಂದ್ರಗಿರಿ ತೀರದಲ್ಲಿ ಕಾದಂಬರಿ ಮೂಲಕ ಪ್ರಸಿದ್ದ ಹೊಂದಿದ ಸಾರಾ ಅಬೂಬಕ್ಕರ್ ಅನೇಕ ಕೃತಿಗಳನ್ನು ರಚಿಸಿದ್ದು, ಅನೇಕ ಪ್ರಶಸ್ರಿಗಳಿಗೂ ಭಾಜನರಾದರು. ಮಂಗಳೂರಿನ ಬಂದರ್ ಝೀನತ್ ಬಕ್ಷ್ ಮಸೀದಿ ಆವರಣದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

error: Content is protected !!

Join the Group

Join WhatsApp Group