(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 10. ಉತ್ತರ ಭಾರತದಲ್ಲಿ ವ್ಯಾಪಕವಾಗಿ ಬೀಸುತ್ತಿರುವ ಶೀತಗಾಳಿಯ ಪ್ರಭಾವವು ಕರ್ನಾಟಕಕ್ಕೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ವರದಿ ಪ್ರಕಟನೆ ತಿಳಿಸಿದೆ.
ಈ ಋತುಮಾನದ ಚಳಿಗಾಲದಲ್ಲಿ ಇದೇ ಮೊದಲ ಬಾರಿಗೆ ಹವಾಮಾನ ಇಲಾಖೆಯು ಶಿತಮಾರುತದ ಎಚ್ಚರಿಕೆ ನೀಡಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಶಿತಗಾಳಿ ಬೀಸುವ ಸಾಧ್ಯತೆಯಿದ್ದು, ಉಷ್ಣಾಂಶವು 5.5 ಡಿಗ್ರಿ ಸೆಲ್ಷಿಯಸ್ಗೆ ಕುಸಿಯಬಹುದು ಎಂದು ತಿಳಿಸಿದೆ. ಯಾವುದೇ ಎರಡು ಹವಾಮಾನ ಮಾಪಕದ ಕೇಂದ್ರಗಳಲ್ಲಿ ಉಷ್ಣಾಂಶವು 4.5ರಿಂದ 6.5 ಡಿಗ್ರಿ ಸೆಲ್ಷಿಯಸ್ನಷ್ಟು ಕುಸಿಯುವುದು ದೃಢಪಟ್ಟಾಗ ಅಥವಾ ಉಷ್ಣಾಂಶವು ಕುಸಿದಾಗ ಶೀತ ಮಾರುತದ ಎಚ್ಚರಿಕೆಯನ್ನು ನೀಡಲಾಗುವುದು ಎಂದು ಹವಾಮಾನ ಇಲಾಖೆಯ ವಿಜ್ಞಾನಿಗಳು ಹೇಳಿದ್ದಾರೆ.