ಬಜರಂಗದಳದ ಕಾರ್ಯಕರ್ತ ಸುನೀಲ್ ನ ಹತ್ಯೆಗೆ ಯತ್ನ ➤ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜ.10.  ಬಜರಂಗದಳ ಕಾರ್ಯಕರ್ತ ಸುನೀಲ್ ನ ಹತ್ಯೆಗೆ ಯತ್ನಿಸಿದ ಆರೋಪಿಗಳನ್ನು ಸಾಗರ ಠಾಣೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.

ಬಂಧಿತರನ್ನು ಸಮೀರ್ , ಮನ್ಸೂರ್ ಮತ್ತು ಐಮಾನ್ ಎಂದು ಗುರುತಿಸಲಾಗಿದೆ.

 

ಸಮೀರ್ ಬಂಧನಕ್ಕಾಗಿ 3 ವಿಶೇಷ ಪೊಲೀಸ್​ ತಂಡ ರಚಿಸಿದ್ದ ಎಸ್​​ಪಿ ಕಾರ್ಯಾಚರಣೆ ನಡೆಸಿ ಶಿವಮೊಗ್ಗದಲ್ಲಿ ಆರೋಪಿ ಸಮೀರ್​​​ನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಕೇಸ್​ನಲ್ಲಿ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.  ಈ ಪ್ರಕರಣದಲ್ಲಿ ಇಬ್ಬರ ಪಾತ್ರದ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಜ.08ರಂದು ಅದ್ಧೂರಿಯಾಗಿ ಶೌರ್ಯ ಸಂಚಲನ ಯಾತ್ರೆ ನಡೆದಿತ್ತು. ಈ ವೇಳೆ ಬಜರಂಗದಳ ಮತ್ತು ವಿಹೆಚ್‌ಪಿ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ವು. ಇದೇ ಪ್ರೋಗ್ರಾಂಗೆ ಸಾಗರ ನಗರದ ಭಜರಂಗದಳ ಸಹ ಸಂಚಾಲಕ ಸುನೀಲ್‌ ಕೂಡಾ ಬಂದಿದ್ದರು ಎನ್ನಲಾಗಿದೆ. ಯಾತ್ರೆಗೆ ಬರೋವಾಗ್ಲೇ ಸುನೀಲ್‌ ಹಾಗೂ ಸಾಗರದ ಸಮೀರ್‌ ನಡುವೆ ಮಾತಿನ ಚಕಮಕಿ ಆಗಿತ್ತು. ಸುಮೀರ್‌ ಮಾತಿಗೆ ಡೋಂಟ್‌ ಕೇರ್‌ ಎಂದ ಸುನೀಲ್‌ ಶಿವಮೊಗ್ಗಕ್ಕೆ ಬಂದು ಯಾತ್ರೆಯಲ್ಲಿ ಭಾಗಿಯಾಗಿದ್ದ. ಆದ್ರೆ ಸಮೀರ್​ಗೆ ಸುನೀಲ್‌ ಮೇಲೆ ಕೋಪವಿತ್ತು. ಹೀಗಾಗಿ ಜ.09ರಂದು ಬೆಳಗಾಗ್ತಿದ್ದಂತೆ ಸುನೀಲ್‌ ಬೈಕ್‌ನಲ್ಲಿ ಹೊರಟಿದ್ದ. ಇದನ್ನು ನೋಡಿದ ಸಮೀರ್‌, ತನ್ನ ಬೈಕ್‌ನಲ್ಲಿದ್ದ ಮಚ್ಚು ತೆಗೆದವನೇ ಸುನೀಲ್‌ ಮೇಲೆ ಅಟ್ಯಾಕ್ ಮಾಡಿದ್ದಾನೆ ಎನ್ನಲಾಗಿದೆ.

Also Read  ಶಸ್ತ್ರಾಸ್ತ್ರಗಳ ಠೇವಣಿ ➤ ಪರಿಷ್ಕøತ ಆದೇಶ

 

 

error: Content is protected !!
Scroll to Top