(ನ್ಯೂಸ್ ಕಡಬ) newskadaba.com ಕಡಬ, ಡಿ.12. ಶ್ರೀ ರಾಮ ಸೇನೆ ಕಡಬ ತಾಲೂಕ್ ಅಧ್ಯಕ್ಷರಾಗಿ ಮೋಹನ್ ಕೆರೆಕೋಡಿ ಹಾಗೂ ಸಂಚಾಲಕರಾಗಿ ಗಣೇಶ್ ಮೀನಾಡಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ಸನ್ನಿಧಿಯಲ್ಲಿ ನಡೆದ ಶ್ರೀರಾಮ ಸೇನೆ ಕಡಬ ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಹ ಸಂಚಾಲಕರಾಗಿ ಅರುಣ್ ಕುಮಾರ್ ರೈ, ಕಡಬ ನಗರ ಸಮಿತಿ ಅಧ್ಯಕ್ಷರಾಗಿ ಗಿರೀಶ್ ರೈ ಕಾಯಂದೂರು, ಸಂಚಾಲಕರಾಗಿ ಮೋಹನ್ ಮಠಂತ್ತಡಿ, ಸಹ ಸಂಚಾಲಕರಾಗಿ ಪ್ರದೀಪ್ ಕಡಬ ಮತ್ತು ಮೇಗೇಶ್ ರವರನ್ನು ನೇಮಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್ ಅಮ್ಟಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಉಜಿರೆ ಮತ್ತು ಗೋಪಾಲ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.