ಕ್ಷುಲ್ಲಕ ಕಾರಣಕ್ಕೆ ಸ್ನೇಹಿತಗೆ ಚಾಕುವಿನಿಂದ ಇರಿತ..!!!

(ನ್ಯೂಸ್ ಕಡಬ) newskadaba.com ಮೈಸೂರು, ಜ.10.   ಮದ್ಯ ಸೇವನೆ ಮಾಡಿದ ನಂತರ ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಸ್ನೇಹಿತರ ನಡುವಿನ ಜಗಳ ಓರ್ವನ ಕೊಲೆಯಲ್ಲಿ  ಅಂತ್ಯಗೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ತಾಲೂಕಿನ ಹರವೆ ಗ್ರಾಮದ ಬಳಿ ವರದಿಯಾಗಿದೆ.

ಕೊಲೆಯಾದವರನ್ನು ಹರವೆ ಗ್ರಾಮದ ಸಣ್ಣಸ್ವಾಮಿ ನಾಯಕ (48) ಎಂದು ಗುರುತಿಸಲಾಗಿದೆ. ಸಣ್ಣಸ್ವಾಮಿ ನಾಯಕನ ಸ್ನೇಹಿತನೇ ಆಗಿರುವ ಕುಮಾರ ನಾಯಕ ಈ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಸಣ್ಣಸ್ವಾಮಿ ನಾಯಕ ಮತ್ತು ಕುಮಾರ ನಾಯಕ ಸ್ನೇಹಿತರಾಗಿದ್ದರು. ಹರವೆ ಗ್ರಾಮದಲ್ಲಿ ಇವರಿಬ್ಬರು ಸೇವೆ ಮದ್ಯಪಾನ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅಮಲೇರಿದಾಗ ಸಣ್ಣಸ್ವಾಮಿ ನಾಯಕ ಕುಮಾರನನ್ನು ಕಿಚಾಯಿಸಲು ಆರಂಭಿಸಿದ್ದಾನೆ. ನಿನಗೆ 37 ವರ್ಷವಾದರೂ ಮದುವೆಯಾಗಿಲ್ಲ. ನಿನಗೆ ಯಾರೂ ಹುಡುಗಿ ಕೊಡುತ್ತಿಲ್ಲ ಅಂತಾ ಸಣ್ಣಸ್ವಾಮಿ ನಾಯಕ ಕಿಚಾಯಿಸಿದ್ದಾನೆ. ತನ್ನ ವೈಯಕ್ತಿ ವಿಚಾರದಲ್ಲಿ ಕಿಚಾಯಿಸಿದ ಹಿನ್ನಲೆ ಕುಪಿತಗೊಂಡ ಕುಮಾರ ನಾಯಕ ಸಣ್ಣಸ್ವಾಮಿ ನಾಯಕನೊಂದಿಗೆ ಮಾತಿಗೆ ಇಳಿದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವೇ ನಡೆದಿದೆ. ಅದರಂತೆ ಚಾಕು ಕೈಗೆತ್ತಿಕೊಂಡ ಕುಮಾರ ನಾಯಕ, ಸಣ್ಣಸ್ವಾಮಿ ನಾಯಕನಿಗೆ ಇರಿದಿದ್ದಾನೆ. ಪರಿಣಾಮ ಸಣ್ಣಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬೆಳ್ತಂಗಡಿ ಬಸ್ಸಿನಲ್ಲಿ ಹೃದಯಘಾತದಿಂದ ಮೃತಪಟ್ಟ ಬ್ಯಾಂಕ್ ಸಿಬ್ಬಂದಿ

error: Content is protected !!
Scroll to Top