ಮಂಗಳೂರು: ಕರಾವಳಿಯಲ್ಲಿ ಹೆಚ್ಚಿದ ಚಳಿ…!!!  ➤ ಸಾಂಕ್ರಾಮಿಕ ರೋಗದ ಭೀತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.10. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.ಕಳೆದ ಡಿಸಂಬರ್ ನಲ್ಲಿ ಕಾಣಿಸಿಕೊಂಡಿದ್ದ ಕಡಿಮೆ ಉಷ್ಣಾಂಶ ಇದೀಗ ಮತ್ತೆ ಕಂಡು ಬರುತ್ತಿದೆ. ಚಳಿಯಿಂದಾಗಿ ರಕ್ತ ಹೆಪ್ಪುಗಟ್ಟುವ ಜೊತೆಗೆ ಹೃದಯಾಘಾತಗಳು ದೇಶದ ಹಲವೆಡೆ ಹೆಚ್ಚಳವಾಗುತ್ತಿದೆ ಎಂದು ವರದಿ ತಿಳಿಸಿದೆ. ಅತಿಯಾದ ಚಳಿಯಿಂದ ಜ್ವರ, ಶೀತ- ಕೆಮ್ಮು, ಗಂಟಲು ನೋವು ಉಂಟಾಗಬಹುದು. ಅಲರ್ಜಿ, ಅಸ್ತಮಾ ರೋಗಿಗಳು ಎಚ್ಚರ ವಹಿಸಬೇಕಾದ ಆವಶ್ಯಕತೆ ಎದುರಾಗಿದೆ.

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕುಂದುವ ಅಪಾಯವಿರುತ್ತದೆ.ಆದ್ದರಿಂದ ಈ ಅವಧಿಯಲ್ಲಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕಿದೆ.
ತಂಪು ಆಹಾರವನ್ನು ಸೇವಿಸಬಾರದು, ಹೊರಗಿನ ಆಹಾರ ಸೇವನೆ ಕಡಿಮೆ ಮಾಡಿ, ದೇಹವನ್ನು ಸ್ವಚ್ಛವಾಗಿಡಿ, ಕುದಿಸಿ ಆರಿಸಿದ ನೀರು, ಬಿಸಿ ಆಹಾರವನ್ನು ಸೇವಿಸಬೇಕು ಎಂದು ವರದಿಯಾಗಿದೆ.

Also Read  ಪಿಕಪ್ ವಾಹಣದಲ್ಲಿ 1 ಕ್ವಿಂಟಾಲ್ ಗೂ ಅಧಿಕ ಗಾಂಜಾ ಸಾಗಾಟ ➤ ಆರೋಪಿಗಳು ಪರಾರಿ

 

 

error: Content is protected !!
Scroll to Top