➤ ದಾವುದ್ ಇಬ್ರಾಹಿಂ ಗೆ ಗುಟ್ಕಾ ಉತ್ಪಾದಕ ಘಟಕ ಸ್ಥಾಪಿಸಲು ನೆರವು ➤ ಮೂವರು ಉದ್ಯಮಿಗಳಿಗೆ 10 ವರ್ಷ ಜೈಲು!

ನ್ಯೂಸ್ ಕಡಬ) newskadaba.com, ಮುಂಬೈ ಜ. 9.  ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಸಹಚರರಿಗೆ ಪಾಕಿಸ್ತಾನದ ಕರಾಚಿಯಲ್ಲಿ ಗುಟ್ಕಾ ಉತ್ಪಾದಕ ಘಟಕ ಸ್ಥಾಪಿಸಲು ನೆರವು ನೀಡಿದ ಪ್ರಕರಣದಲ್ಲಿ ಉದ್ಯಮಿ ಜೆ.ಎಂ. ಜೋಶಿ ಮತ್ತು ಇಬ್ಬರಿಗೆ ಇಲ್ಲಿನ ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಜೋಶಿ,ಅನ್ಸಾರಿ, ಜಮೀರುದ್ದೀನ್ ಮತ್ತು ಫಾರುಖ್ ಮನ್ಸೂರಿ ಅವರನ್ನು ಅರೋಪಿಗಳು ಎಂದು ಪರಿಗಣಿಸಿದೆ. ಅರೋಪಿಗಳಿಗೆ ಹಣಕಾಸು ವಿಚಾರದಲ್ಲಿ ಈ ಹಿಂದೆ ಸಂಘರ್ಷ ಏರ್ಪಟ್ಟಿತ್ತು. ಇದನ್ನು ಸರಿಪಡಿಸಲು ಅವರು ಇಬ್ರಾಹಿಂ ನೆರವು ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಕರಾಚಿಯಲ್ಲಿ ಗುಟ್ಕಾ ಘಟಕ ಸ್ಥಾಪನೆಗೆ ನೆರವು ನೀಡುವಂತೆ ಇಬ್ರಾಹಿಂ ಬೇಡಿಕೆ ಇಟ್ಟಿದ್ದ ಎಂದು ವಿಚಾರಣೆ ವೇಳೆ ಮಾಹಿತಿ ಲಭ್ಯವಾಗಿದೆ.

error: Content is protected !!
Scroll to Top