ಕಾಂತಾರ ಸಿನಿಮಾ ಜ.15ರಂದು ಟಿವಿಯಲ್ಲಿ ಪ್ರಸಾರ ➤ ನಟ ರಿಷಬ್ ಶೆಟ್ಟಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜ. 09. ಇಡೀ ದೇಶವೇ ಕೊಂಡಾಡಿದ ಕನ್ನಡ ಸಿನಿಮಾ ‘ಕಾಂತಾರ ಸಿನಿಮಾ ಶೀಘ್ರದಲ್ಲೇ ಟಿವಿಯಲ್ಲಿ ಪ್ರಸಾರವಾಗಲಿದ್ದು, ಹೊಂಬಾಳೆ ಫಿಲ್ಮ್ಸ್​​ಬ್ಯಾನರ್​ ಅಡಿಯಲ್ಲಿ ಮೂಡಿಬಂದ ‘ಕಾಂತಾರ’ ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿಯಾದ ಕಂಬಳ, ಭೂತಕೋಲ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ.

ಇದರಲ್ಲಿ ರಿಷಬ್​ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್​ ಕುಮಾರ್​, ಪ್ರಮೋದ್​​ ಶೆಟ್ಟಿ, ಕಿಶೋರ್​ ಮುಂತಾದವರು ಅಭಿನಯಿಸಿದ್ದಾರೆ. ‘ಸ್ಟಾರ್​ ಸುವರ್ಣ’ ವಾಹಿನಿಯು ‘ಕಾಂತಾರ’ ಚಿತ್ರದ ಪ್ರಸಾರ ಹಕ್ಕುಗಳನ್ನು ಕೊಂಡುಕೊಂಡಿದ್ದು, ಜ.15 ರಂದು ಕಾಂತಾರ ಸಿನಿಮಾ  ಸಂಕ್ರಾಂತಿ ಹಬ್ಬದ ಪ್ರಯುಕ್ತ ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ತಿಳಿದುಬಂದಿದೆ.

Also Read  ತುಳುನಾಡ ತುಡರ್ ಯುವಕ ಮಂಡಲದ ಅಧ್ಯಕ್ಷರಾಗಿ ತಿರುಮಲೇಶ್ವರ ಸಾಕೋಟೆ ಆಯ್ಕೆ

error: Content is protected !!
Scroll to Top