ರೈಲಿಗೆ ಸಿಲುಕಿ ಮೂವರ ಮೃತದೇಹಗಳು ಛಿದ್ರಛಿದ್ರ..!!!

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ , ಜ.09.  ರೈಲ್ವೆ ಹಳಿ ಮೇಲೆ ಮೂವರ ಮೃತದೇಹಗಳು ಛಿದ್ರಛಿದ್ರ ವಾಗಿ ಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ರೈಲ್ವೆ ನಿಲ್ದಾಣದ ಸಮೀಪ ವರದಿಯಾಗಿದೆ.

ಒಂದೇ ಕುಟುಂಬದ ಮೂವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಇಲ್ಲವೇ ಯಾರೋ ಕೊಲೆ ಮಾಡಿ ಶವಗಳನ್ನು ರೈಲ್ವೆ ಹಳಿ ಮೇಲೆ ಎಸೆದಿರಬಹುವುದು ಎಂದು ಶಂಕೆ ವ್ಯಕ್ತವಾಗಿದೆ. ಓರ್ವ ಪುರುಷ ಹಾಗೂ ಇಬ್ಬರು ಮಹಿಳೆಯರು ಗುರುತು ಸಿಗದಷ್ಟು ಮೃತದೇಹಗಳು ಛಿದ್ರವಾಗಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಯಶವಂತಪುರದ  ರೈಲ್ವೆ ಪೊಲೀಸ್ ಪಿಎಸ್ಐ ಶಿವಕುಮಾರ್ ಹಾಗೂ ಗೌರಿಬಿದನೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೃತನ ಶರ್ಟ್ ನ ಮೇಲೆ ‘ವಿನಾಯಕ ಟೈಲರ್ಸ್ ಗೌರಿಬಿದನೂರು’ ಎಂಬ ಮಾಹಿತಿ ಲಭಿಸಿದೆ ಎನ್ನಲಾಗಿದೆ.

Also Read  ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

error: Content is protected !!
Scroll to Top