ಮಂಗಳೂರು: ಕೊರಗಜ್ಜನ ಕೃಪೆಯಿಂದಲೇ ನಾನು ಬಿಗ್ ಬಾಸ್ ಗೆದ್ದೆ…!! ➤  ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.09. ತುಳುನಾಡ ದೈವ ಕೊರಗಜ್ಜನ ಪವಾಡ ಅಪಾರ. ಕೊರಗಜ್ಜನ ಮಹಿಮೆಯ ಬಗ್ಗೆ ತುಳುನಾಡ ಜನರಿಗೆ ಬಹಳ ನಂಬಿಕೆ ಇದೆ. ಅದಕ್ಕೆ ತಕ್ಕಂತೆ ಅನೇಕ ಪವಾಡಗಳು ನಡೆದಿವೆ. ಈ ದೈವದ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ, ನಡೆದುಕೊಂಡವರಿಗೆ ಕೊರಗಜ್ಜ ಶಿಕ್ಷಿಸಿದ್ದೂ ಇದೆ. ಹಾಗೇ ನಂಬಿದವರನ್ನು ಕೈ ಹಿಡಿದು ಮೇಲೆತ್ತಿದ ಅನೇಕ ಉದಾಹರಣೆಗಳನ್ನೂ ತುಳುನಾಡ ಜನ ಭಕ್ತಿಯಿಂದ ಹೇಳುತ್ತಾರೆ. ತುಳುನಾಡ ದೈವ ಕೊರಗಜ್ಜನನ್ನು ಅನೇಕ ಸೆಲೆಬ್ರಿಟಿಗಳು ನಂಬಿದ್ದೂ ಇದೆ. ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಿ ಬಂದಿದ್ದರು. ಕೊರಗಜ್ಜನ ಮಹಿಮೆಗೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಈ ಬಾರಿಯ ಬಿಗ್‌ಬಾಸ್ ವಿನ್ನರ್ ರೂಪೇಶ್‌ ಶೆಟ್ಟಿಯ ಗೆಲುವಿನ ಹಿಂದೆ ಕೊರಗಜ್ಜನ ಪವಾಡ ಇದೆಯಾ ಅನ್ನುವುದು ಸದ್ಯದ ಪ್ರಶ್ನೆ..!

Also Read  ➤ 2 ವರ್ಷದ B.Ed ಕೋರ್ಸ್ ಗೆ ಅರ್ಜಿ ಆಹ್ವಾನ!

ಇದಕ್ಕೆ….ಹೌದು ಅನ್ನುವ ಉತ್ತರವನ್ನು ಸ್ವತಃ ರೂಪೇಶ್‌ ಶೆಟ್ಟಿ ಅವರೇ ನೀಡಿದ್ದಾರೆ. ‘ಮಂಗಳೂರಿಗೆ ಬಂದಾಗ ಮೊದಲು ಹೋಗುವುದು ಕುತ್ತಾರು ಎಂಬ ಪ್ರದೇಶಕ್ಕೆ. ಇದು ನಾನು ನಂಬುವ ಕೊರಗಜ್ಜ ದೈವದ ಕ್ಷೇತ್ರ. ಸೋ ಅವರು ಗೆಲ್ಲಿಸಿದ್ದಾರೆ, ಕೊರಗಜ್ಜ ಕಾಪಾಡಿದ್ದಾರೆ. ಅವರ ಕೃಪೆಯಿಂದಲೇ ನಾನು ಬಿಗ್ ಬಾಸ್ ಗೆದ್ದೆ’ ಎಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ ಎನ್ನಲಾಗಿದೆ.

 

error: Content is protected !!
Scroll to Top