ಸುಬ್ರಹ್ಮಣ್ಯ: ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಗ್ರಾ.ಪಂ ಸದಸ್ಯೆ ಪತ್ತೆ

(ನ್ಯೂಸ್ ಕಡಬ)newskadaba.com ಸುಬ್ರಹ್ಮಣ್ಯ, ಜ.09. ಸುಮಾರು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಕೊನೆಗೂ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ ಎಂದು ವರದಿ ತಿಳಿಸಿದೆ.

ತನ್ನಿಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಪತಿಯನ್ನು ತೊರೆದು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯನ್ನು ಹುಡುಕಿ ಕೊಡುವಂತೆ ಗ್ರಾ.ಪಂ ವತಿಯಿಂದ ಹಾಗೂ ಪಕ್ಷದ ವತಿಯಿಂದ ಮನವಿ ನೀಡಲಾಗಿತ್ತು. ಈ ನಡುವೆ  ತನ್ನ ಪ್ರಿಯಕರನೊಂದಿಗಿರುವ ಬಗ್ಗೆ ಮಹಿಳೆ  ಸ್ವತಃ  ವಿಡಿಯೋ ಮೂಲಕ ಕುಟುಂಬಸ್ಥರಿಗೆ ತಿಳಿಸಿದ್ದರು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ   ಸುಬ್ರಹ್ಮಣ್ಯ ಪೊಲೀಸರು ಅವರನ್ನು ಹುಡುಕುವ ಪ್ರಯತ್ನ ಮಾಡಿದ್ದರು. ಮಹಿಳೆ ತನ್ನ ಪ್ರಿಯಕರನೊಂದಿಗೆ ನ್ಯಾಯವಾದಿ ಮುಖಾಂತರ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ತಾನು  ಪ್ರಿಯಕರನೊಂದಿಗೆ  ಜೀವನ ಮುಂದುವರೆಸುವ ತನ್ನ ನಿರ್ಧಾರವನ್ನು ಲಿಖಿತ ರೂಪದಲ್ಲಿ ಬರೆದು ಕೊಟ್ಟು ಆತನೊಂದಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Also Read  ಗೃಹರಕ್ಷಕಿಯರ ಅಧಿಕಾರಿಗಳ ತರಬೇತಿ

 

 

error: Content is protected !!
Scroll to Top