ಮೊದಲ ಬಾರಿಗೆ ಅಮೇರಿಕಾದಲ್ಲಿ ಜಡ್ಜ್ ಆಗಿ ಭಾರತೀಯ ಮಹಿಳೆ ಆಯ್ಕೆ

(ನ್ಯೂಸ್ ಕಡಬ)newskadaba.com  ಅಮೆರಿಕ, ಜ.09.  ಭಾರತೀಯ ಮೂಲದ ಸಿಖ್ ಮಹಿಳೆಯೊಬ್ಬರು ಅಮೆರಿಕದಲ್ಲಿ ನ್ಯಾಯಾಧೀಶರ ಹುದ್ದೆಗೇರಿದ್ದು, ಅಮೆರಿಕದಲ್ಲಿ ನ್ಯಾಯಾಧೀಶ ಹುದ್ದೆಗೇರಿದ ಮೊದಲ ಸಿಖ್ ಮಹಿಳಾ ನ್ಯಾಯಾಧೀಶೆ ಎಂಬ ಹಿರಿಮೆಗೆ ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ಪಾತ್ರರಾಗಿದ್ದಾರೆ ಎಂದು ವರದಿಯಾಗಿದೆ. ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮನ್‌ಪ್ರೀತ್ ಅವರ ತಂದೆ 1970 ರ ದಶಕದ ಆರಂಭದಲ್ಲಿ ಯುಎಸ್‌ಗೆ ವಲಸೆ ಬಂದ ಪರಿಣಾಮ ಮನ್‌ಪ್ರೀತ್ ಅಲ್ಲೇ ಹುಟ್ಟಿ ಬೆಳೆದರು. ಈಗ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಳ್ಳೈರ್‌ನಲ್ಲಿ ವಾಸಿಸುತ್ತಿದ್ದಾರೆ. ಅಟಾರ್ನಿಯಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ಹಲವರು ನಾಗರಿಕ ಹಕ್ಕುಗಳ ಸಂಘಟನೆಗಳ ಜೊತೆ ಕೆಲಸ ಮಾಡಿದ್ದಾರೆ.

Also Read  ಅಗಲ ಕಿರಿದಾದ ಕಡಬ - ಪಂಜ ರಸ್ತೆಯ ಅಭಿವೃದ್ಧಿಗೆ ಚಾಲನೆ ► 5 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣಗೊಳ್ಳುತ್ತಿದೆ ಜಿಲ್ಲಾ ಮುಖ್ಯರಸ್ತೆ

ಹ್ಯಾರಿಸ್ ಕೌಂಟಿಯ ಸಿವಿಲ್ ಕೋರ್ಡ್ ನ್ಯಾಯಾಧೀಶರಾಗಿ ನೇಮಕವಾಗಿದ್ದೇನೆ ಎಂದು ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ನಿಜಕ್ಕೂ ಗೌರವದ ವಿಚಾರ ಎಂದ ಅವರು ಬರೆದುಕೊಂಡಿದ್ದಾರೆ.

 

error: Content is protected !!
Scroll to Top