(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.09. ನೋಟಿನಲ್ಲಿ ಬರೆದರೆ ಆ ನೋಟು ಅಮಾನ್ಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿದ್ದು, ಇದರಿಂದ ಬರಹ ಇದ್ದ ನೋಟ್ ಗಳನ್ನು ಹೊಂದಿರುವವರು ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. 2000 ರೂಪಾಯಿ, 500 ರೂಪಾಯಿ ಸೇರಿ ಯಾವುದೇ ನೋಟುಗಳಲ್ಲಿ ಬರೆದಿದ್ದರೆ ಅದನ್ನು ಅಮಾನ್ಯ ಮಾಡಲಾಗುತ್ತದೆ ಎಂದು ಇತ್ತೀಚೆಗೆ ಆರ್‌ಬಿಐ ನಿಯಮ ಹೇಳಿದೆ ಎಂದು ತಿಳಿದುಬಂದಿದೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯು ಸುಳ್ಳಾಗಿದೆ. ಯಾವುದೇ ನೋಟಿನಲ್ಲಿ ಬರೆದಿದ್ದರು ಅದನ್ನು ಅಮಾನ್ಯಗೊಳಿಸಲಾಗುವುದಿಲ್ಲ. ಅದು ಚಾಲವಣೆಯಲ್ಲಿನ ನೋಟಾಗಿಯೇ ಉಳಿಯುತ್ತದೆ. ಆದರೆ ಆರ್‌ಬಿಐ ಮಾತ್ರ ನೋಟಿನಲ್ಲಿ ಬರೆಯಬೇಡಿ ಎಂದು ಜನರಿಗೆ ಮನವಿ ಮಾಡಿದೆ. ನೋಟಿನ ಮೇಲೆ ತೂತನ್ನು ಮಾಡಬೇಡಿ, ನೋಟನ್ನು ಆಟಿಕೆಗಾಗಿ, ಅಲಂಕಾರಕ್ಕಾಗಿ, ಮಾಲೆ ಮಾಡಿ ಹಾಕಲೆಂದು, ನೃತ್ಯ ಮಾಡುವವರಿಗೆ ಎಸೆಯಲೆಂದು ಬಳಕೆ ಮಾಡಬೇಡಿ ಎಂದು ಆರ್‌ಬಿಐ ತಿಳಿಸುತ್ತದೆ.ನೋಟಿನ ಮೇಲೆ ಬರೆಯಬೇಡಿ ಹಾಗೂ ಅದರ ಮೇಲೆ ಚಿತ್ರವನ್ನು ಮಾಡಬೇಡಿ ಎಂದು ಆರ್‌ಬಿಐ ಮನವಿ ಮಾಡಿದೆ ಎಂದು ವರದಿ ತಿಳಿಸಿದೆ.