ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೊರವರಿಗೆ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಮೂಡಬಿದ್ರೆ, ಜ.09.  ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಯಾಗಿ ಅಲ್ಫೋನ್ಸ್  ಫ್ರಾಂಕೊರವರು ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಬಂದಾಗ ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಲಾಯಿತು ಎಂದು ವರದಿಯಾಗಿದೆ.

ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಪಕ್ಷದ ನಾಯಕರು ಕಾರ್ಯಕರ್ತರು, ಹಿತೈಷಿಗಳು, ಹಾಗೂ ಮಹಿಳೆಯರು ಅದ್ದೂರಿಯ ಸ್ವಾಗತಿಸಿದರು ಎಂದು ತಿಳಿದು ಬಂದಿದೆ. ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ವಿಮ್ ರಾಷ್ಟ್ರೀಯ ಕಾರ್ಯದರ್ಶಿ ಅಯಿಷಾ ಬಜ್ಪೆ, ಜಿಲ್ಲಾ  ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರಾದ್ಯಕ್ಷ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ನಿಸಾರ್ ಮರವೂರು, ಜೊತೆ ಕಾರ್ಯದರ್ಶಿ ಮುಬೀನ್ ಕೊಳ್ನಾಡ್, ಕೋಶಾಧಿಕಾರಿ ಅಯ್ಯೂಬ್ ಸೂರಿಂಜೆ, ಹಂಡೇಲು ಗ್ರಾಮ ಪಂಚಾಯತ್ ಉಪಾದ್ಯಕ್ಷೆ ತಾಹಿರಾ ಹಂಡೇಲು, ಗುರುಪುರ  ಗ್ರಾಮ ಪಂಚಾಯತ್ ಸದಸ್ಯ ಎ.ಕೆ‌.ರಿಯಾಝ್ ಅಡ್ಡೂರು,  ಸೂರಿಂಜೆ ಗ್ರಾಮ ಪಂಚಾಯತ್ ಸದಸ್ಯ ಸಲಾಂ ಸೂರಿಂಜೆ, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ಶಿಹಾಬ್, ಫರ್ವೀಝ್ ಅಲಿ, ಸಿದ್ದೀಕ್ ಈದ್ಗಾ, ಶಬಾನಾ ಅಶ್ರಫ್, ಖೈರುನ್ನೀಸಾ ರಿಯಾಝ್, ಬ್ಲಾಕ್, ಗ್ರಾಮ, ಬೂತ್ ಸಮಿತಿಗಳ ನಾಯಕರು, ಹಾಗೂ ನೂರಾರು ಕಾರ್ಯಕರ್ತರು, ಹಿತೈಷಿಗಳು,ಮಹಿಳೆಯರು, ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು ಎನ್ನಲಾಗಿದೆ.

error: Content is protected !!

Join the Group

Join WhatsApp Group