ಬಡ ರೈತನ ಗುಡಿಸಲಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ➤  50 ಸಾವಿರ ರೂ. ಮೌಲನ್ಯ ದಿನಸಿ ಸಾಮಗ್ರಿ ಸುಟ್ಟು ಭಸ್ಮ..!!

(ನ್ಯೂಸ್ ಕಡಬ) newskadaba.com ಮೈಸೂರು, ಜ.08.  ಕಿಡಿಗೇಡಿಗಳು .50 ಸಾವಿರ ಮೌಲ್ಯದ ದಿನಸಿ ಸಾಮಗ್ರಿಗಳಿಗೆ ಬೆಂಕಿ ಹಾಕಿರುವ ಘಟನೆ ಬಾರಸೆ ಕೊಪ್ಪಲು ಗ್ರಾಮದಲ್ಲಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿದ ಬಾರಸೆ ಕೊಪ್ಪಲು ಗ್ರಾಮದ ರಾಜೆಅರಸ್‌ ಅವರ ಜಮೀನಿನಲ್ಲಿ ಘಟನೆ ನಡೆದಿದ್ದು, ಬೆಳತ್ತೂರು ಗ್ರಾಮದ ರೈತ ಪುರುಷೋತ್ತಮ ಕಳೆದ ಒಂದು ವರ್ಷಗಳ ಹಿಂದೆ ಬಾರಿಸೆ ಕೊಪ್ಪಲು ಗ್ರಾಮದಲ್ಲಿ ರಾಜೆ ಅರಸ್‌ ಎಂಬವರಿಗೆ ಸೇರಿದ ಜಮೀನನ್ನು ಕೃಷಿ ಮಾಡಲು ಗುತ್ತಿಗೆ ಪಡೆದು ಗುಡಿಸಿಲು ಹಾಕಿಕೊಂಡು ಅಲ್ಲೇ ವಾಸವಾಗಿದ್ದರು.

Also Read  ಇಬ್ಬರು ಮಕ್ಕಳೊಂದಿಗೆ ನೇತ್ರಾವತಿ ನದಿಗೆ ಹಾರಿದ ಮೈಸೂರಿನ ಮಹಿಳೆ ➤ ಮಹಿಳೆ ಮೃತ್ಯು, ಇಬ್ಬರು ಕಣ್ಮರೆ

ಅವರು ಇಲ್ಲದ ಸಮಯ ನೋಡಿಕೊಂಡು ಕಿಡಿಗೇಡಿಗಳು ಗುಡಿಸಿಲಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ದವಸ, ಧಾನ್ಯ, ಪಾತ್ರೆಗಳು ಸುಟ್ಟು ಹೋಗಿವೆ. ಮೋಟಾರ್‌ ಹಾಗೂ ಪೈಪುಗಳನ್ನು ಕಳುವು ಮಾಡಿದ್ದಾರೆ. ಈ ಸಂಬಂಧ ರೈತ ಪುರುಷೋತ್ತಮ್‌ ಬೆಟ್ಟದಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಟ್ಟದಪುರ ಪೊಲೀಸ್‌ ಠಾಣೆಯ ಮುಖ್ಯ ಪೇದೆ ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.

 

 

error: Content is protected !!