ಭೂಮಿಗೆ ಬೀಳಲಿದೆ 38 ವರ್ಷ ಹಳೆಯ ನಾಸಾ ಉಪಗ್ರಹ !

(ನ್ಯೂಸ್ ಕಡಬ) newskadaba.com ಅಮೆರಿಕ, ಜ.08. ಬಾಹ್ಯಾಕಾಶದಲ್ಲಿ ಉಪಗ್ರಹಗಳ ದೊಡ್ಡ ದಂಡೇ ಇದ್ದು, ಅವು ನಿಗದಿತ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ. ಇಸ್ರೋ ಹಾಗೂ ನಾಸಾದಂತಹ ಸಂಸ್ಥೆಗಳಿಗೆ ಉಪಗ್ರಹ ಉಡಾವಣೆ ಈಗಂತೂ ‘ರಾಕೆಟ್‌’ ಪಟಾಕಿ ಹಾರಿಸಿದಷ್ಟೇ ಸಲೀಸು. ಹೀಗೆ 38 ವರ್ಷಗಳ ಹಿಂದೆ ನಾಸಾ ಉಡಾವಣೆಗೊಳಿಸಿದ್ದ ‘ಅರ್ಥ್ ರೇಡಿಯೇಷನ್‌ ಬಜೆಟ್‌ ಸ್ಯಾಟಲೈಟ್‌’ ಆಗಸದಿಂದ ಭೂಮಿಗೆ ಬೀಳಲಿದೆ ಎಂದು ನಾಸಾ ಹೇಳಿದೆ ಎನ್ನಲಾಗಿದೆ. ಅಮೆರಿಕದ ರಕ್ಷಣಾ ಇಲಾಖೆಯು, ಉಪಗ್ರಹವು ಭಾನುವಾರ ಸಂಜೆ 6.40ಕ್ಕೆ ಭೂಮಿಗೆ ಅಪ್ಪಳಿಸಲಿದೆ ಎಂದು ಹೇಳಿದ್ದರೆ, ಕ್ಯಾಲಿಫೋರ್ನಿಯಾದ ‘ಏರೋಸ್ಪೇಸ್‌ ಕಾರ್ಪೊರೇಷನ್‌’ ಸೋಮವಾರ ನಸುಕಿನಲ್ಲಿ ಭೂಮಿಗೆ ಬೀಳಬಹುದು ಎಂದು ಅಂದಾಜಿಸಿದೆ.

ಉಪಗ್ರಹ ಭೂಮಿಗೆ ಬೀಳುತ್ತಿದ್ದರೂ ಅದರಿಂದ ಅಪಾಯ ಎದುರಾಗುವ ಸಾಧ್ಯತೆ ತೀರಾ ಕಡಿಮೆ. 2,450 ಕೆ.ಜಿ. ತೂಕದ ಉಪಗ್ರಹವು ಭೂಮಿಯ ವಾತಾವರಣ ಪ್ರವೇಶಿಸುತ್ತಲೇ ಘರ್ಷಣೆಯಿಂದ ಬಹುಪಾಲು ಉರಿದುಹೋಗಲಿದೆ. ಆದಾಗ್ಯೂ ಅದರ ಅವಶೇಷಗಳು ಭೂಮಿಗೆ ಅಪ್ಪಳಿಸಲಿದ್ದು, ಇದರಿಂದ ಆತಂಕವಿಲ್ಲ ಎಂದು ನಾಸಾ ಸ್ಪಷ್ಟಪಡಿಸಿದೆ. ಭೂಮಿಗೆ ಬೀಳುವ ಮುನ್ನ ಅದು ಆಫ್ರಿಕಾ, ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಮತ್ತು ದಕ್ಷಿಣ ಅಮೆರಿಕದ ಪಶ್ಚಿಮ ಭಾಗಗಳಲ್ಲಿ ಸಿಡಿದು ಹೋಗಲಿದೆ ಎಂದು ನಿರೀಕ್ಷಿಸಲಾಗಿದೆ.

Also Read  ಒಂದೇ ಬೈಕ್‌ ನಲ್ಲಿ 6 ಮಂದಿ ತೆರಳುತ್ತಿದ್ದಾಗ ಢಿಕ್ಕಿ ಹೊಡೆದ ಟೆಂಪೋ !       ➤ ನಾಲ್ವರು ದುರ್ಮರಣ

 

 

error: Content is protected !!
Scroll to Top