ಮಂಗಳೂರು: ಕರಾವಳಿ ಭದ್ರತೆ ಹೆಚ್ಚಿಸಲು ಇನ್ನೆರಡು ರಾಡಾರ್‌ ಸ್ಥಾಪನೆ..! ➤  ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.08. ರಾಜ್ಯದ ಕರಾವಳಿ ಪ್ರದೇಶದ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಕಡಲ ತಡಿಯಲ್ಲಿ ಇನ್ನೆರಡು ರಾಡಾರ್‌ ಅಳವಡಿಸಲಾಗುವುದು ಎಂದು ಕೋಸ್ಟ್‌ ಗಾರ್ಡ್‌ ಕರ್ನಾಟಕ ಕಮಾಂಡರ್‌ ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ ಎನ್ನಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸುರತ್ಕಲ್‌ ಮತ್ತು ಭಟ್ಕಳದಲ್ಲಿ ರಾಡಾರ್‌ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ಉತ್ತರ ಕನ್ನಡದ ಬೇಲೆಕೇರಿ ಮತ್ತು ಉಡುಪಿಯ ಕುಂದಾಪುರದಲ್ಲಿ ರಾಡಾರ್‌ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಬೇಲೆಕೇರಿಯಲ್ಲಿ ರಾಡಾರ್‌ ಟವರ್‌ ಬಹುತೇಕ ಸಿದ್ಧಗೊಂಡಿದೆ. ಕುಂದಾಪುರದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

Also Read  ಪುತ್ತೂರು: ಬೈಕ್,ಜೀಪ್ ಅಪಘಾತ ➤ ಬೈಕ್ ಸವಾರ ಮೃತ್ಯು

 

error: Content is protected !!
Scroll to Top