ಇಂದು ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆ ► ಚಿನ್ನಾಭರಣಗಳೊಂದಿಗೆ ಪರಾರಿ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಡಿ.11. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವಕನ ಜೊತೆ ಇಂದು ಹಸೆಮಣೆ ಏರಬೇಕಿದ್ದ ಯುವತಿಯೋರ್ವಳು ಮದುವೆ ಮನೆಯಿಂದಲೇ ಪರಾರಿಯಾದ ಘಟನೆ ಮೂಡಬಿದಿರೆಯಲ್ಲಿ ಭಾನುವಾರದಂದು ನಡೆದಿದೆ.

ಇಲ್ಲಿನ ಧರೆಗುಡ್ಡೆ ನಿವಾಸಿ ಪ್ರೀಯಾಂಕಳಿಗೆ ವಿದೇಶದಲ್ಲಿ ನೌಕರಿ ಮಾಡುವ ಯುವಕನ ಜೊತೆ ಮದುವೆ ನಿಶ್ಚಯ ವಾಗಿತದ್ದು, ಸೋಮವಾರದಂದು ಮದುವೆ ನಡೆಯಲಿತ್ತು. ಅದರೆ ಪ್ರಿಯಾಂಕ ಮಾತ್ರ 10 ಪವನ್ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್,ಇತರ ವಸ್ತುಗಳೊಂದಿಗೆ ಪರಾರಿಯಾಗಿದ್ದಾಳೆ. ತಂದೆ ಇಲ್ಲದ ಮಗಳನ್ನು ತಾಯಿ ಕಷ್ಟಪಟ್ಟು ಸಾಕಿದ್ದು ಈಗ ಮಗಳೇ ಮರ್ಯಾದೆಯನ್ನು ಹರಾಜು ಹಾಕಿ ಹೋಗಿರೋದು ತಾಯಿಯ ಹಾಗೂ ಕೌಟುಂಬಿಕರ ನೆಮ್ಮದಿಯನ್ನು ಕೆಡಿಸಿದೆ. ಪ್ರಿಯಾಂಕಾಳಿಗೆ ಫರಂಗಿಪೇಟೆಯ ಹೈದರ್ ಎಂಬಾತನ ಜೊತೆ ಸಂಪರ್ಕ ಇತ್ತೆನ್ನಲಾಗಿದ್ದು, ಆತನೊಂದಿಗೆ ತೆರಳಿರಬಹುದೆಂದು ಶಂಕಿಸಲಾಗಿದೆ.

Also Read  ಬಾಲಕಿ ಮೇಲೆ ಅತ್ಯಾಚಾರ ಯತ್ನ ➤ ಆರೋಪಿಗಳನ್ನು ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ಮೂಡಬಿದ್ರೆ ಠಾಣೆಯಲ್ಲಿ ವಧು ಪರಾರಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top