ಆಸ್ಪತ್ರೆಯಲ್ಲಿರುವ ಒಡತಿಗಾಗಿ ನರ್ಸಿಂಗ್ ಹೋಂ ಮುಂದೆ ಕಾದು ಕುಳಿತ ನಾಯಿ !!

(ನ್ಯೂಸ್ ಕಡಬ) newskadaba.com  ತೀರ್ಥಹಳ್ಳಿ, ಜ.08. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಒಡತಿಗಾಗಿ ನಾಲ್ಕು ದಿನಗಳ ಕಾಲ ನರ್ಸಿಂಗ್ ಹೋಂ ಎದುರು ನಾಯಿಯೊಂದು ಕಾದು ಕುಳಿತಿದ್ದ ಪ್ರಸಂಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ವರದಿಯಾಗಿದೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಅವರು  ಅನಾರೋಗ್ಯದಿಂದ ಪಟ್ಟಣದ ಖಾಸಗಿ ನರ್ಸಿಂಗ್‌ ಹೋಮ್‌ಗೆ ದಾಖಲಾಗಿದ್ದರು.

ನಾಗರತ್ನ ಶಾಸ್ತ್ರಿ ನರ್ಸಿಂಗ್ ಹೋಮ್‌ಗೆ ದಾಖಲಾದ ದಿನದಿಂದ ಬಾಗಿಲಲ್ಲೇ ವಾರ್ಡಿನ ಕಡೆ ಮುಖ ಮಾಡಿ ಕಾದು ನಿಂತಿರುತಿತ್ತು. ಆಸ್ಪತ್ರೆ ಸಿಬ್ಬಂದಿ ಓಡಿಸಿದರೂ ಪುನಃ ಬಂದು ಬಾಗಿಲಲ್ಲೇ ನಿಂತಿರುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಾಗರತ್ನಾ ಶಾಸ್ತ್ರಿ ಎರಡು ದಿನಗಳ ಹಿಂದೆ ಮೃತ ಪಟ್ಟಿದ್ದು ಬಳಿಕ ಪಪ್ಪಿ ಆಹಾರ ಸೇವಿಸಿಲ್ಲ ಎನ್ನಲಾಗಿದೆ.  ನಾಯಿ ನರ್ಸಿಂಗ್ ಹೋಮ್ ಬಾಗಿಲಲ್ಲಿ ಕಾದು ಕುಳಿತಿರುವ ಪೋಟೋ ವೈರಲ್ ಆಗಲಾರಂಬಿಸಿದೆ. ನಾಗರತ್ನಾ ಶಾಸ್ತ್ರಿರನ್ನು ಅವರ ಪಪ್ಪಿ ಹೆಸರಿನ 8 ತಿಂಗಳ ನಾಯಿಯ ಈ ವರ್ತನೆ ಸಾರ್ವಜನಿಕವಾಗಿ ಕುತೂಹಲ ಕೆರಳಿಸಿದೆ.

Also Read  SSLC ಪರೀಕ್ಷೆ ರದ್ದು ಗೊಳಿಸಿ ➤ 15 ಸಂಘಟನೆಗಳಿಂದ ಪತ್ರಕ್ಕೆ ಸಹಿ

 

error: Content is protected !!
Scroll to Top