ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ ದಿಲ್ಲಿ ಪೊಲೀಸರ ಮೇಲೆ ಆಫ್ರಿಕನ್ನರ ಗುಂಪಿನ ದಾಳಿ..!!

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಜ.08. ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ನೆಲೆಸಿರುವ ಆರೋಪದಲ್ಲಿ ಬಂಧಿಸಲಾಗಿದ್ದ ನೈಜೀರಿಯಾ ಪ್ರಜೆಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುವ ವೇಳೆ ಗುಂಪುಗೂಡಿದ ನೂರಾರು ಆಫ್ರಿಕನ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಬಂಧಿತರನ್ನು ಬಿಡುಗಡೆ ಮಾಡಿದ ಘಟನೆ ದಕ್ಷಿಣ ದಿಲ್ಲಿಯ ನೆಬ್ ಸರೈ ಪ್ರದೇಶದಲ್ಲಿ ವರದಿಯಾಗಿದೆ.

ದಿಲ್ಲಿನ ಮಾದಕವಸ್ತು ನಿಗ್ರಹ ಘಟಕದ ಪೊಲೀಸರು, ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲಿ ಉಳಿದುಕೊಂಡಿರುವ ನೈಜೀರಿಯಾದ ಮೂವರು ಪ್ರಜೆಗಳನ್ನು ನೆಬ್ ಸರೈನ ರಾಜು ಪಾರ್ಕ್‌ನಲ್ಲಿ ಬಂಧಿಸಿದ್ದರು. ಅವಧಿ ಮೀರಿ ಉಳಿದುಕೊಂಡಿರುವ ವಿದೇಶಿ ಪ್ರಜೆಗಳ ವಿವರಗಳನ್ನು ಪಟ್ಟಿ ಮಾಡಿದ್ದ ಪೊಲೀಸರು, ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

Also Read  ಬಂಟ್ವಾಳ: ಆಟೋ ರಿಕ್ಷಾ ಅಪಘಾತ ➤ ಮಹಿಳೆ ಗಂಭೀರ

 

 

error: Content is protected !!
Scroll to Top