ಮುಡಿಪು: ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು ► ಲಕ್ಷಾಂತರ ಬೆಲೆಯ ಮೊಬೈಲ್ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.10. ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ಜಂಕ್ಷನ್ ನ ಹೃದಯ ಭಾಗದಲ್ಲಿರುವ ಪಿಕೆ ಟವರ್ ನ ಒಂದನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ‘4G ಮೊಬೈಲ್ ವರ್ಲ್ಡ್’ ಮೊಬೈಲ್ ಅಂಗಡಿಗೆ ನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೊಬೈಲ್ ಫೋನ್ ಗಳನ್ನು ಕದ್ದೊಯ್ದ ಘಟನೆ ಭಾನುವಾರದಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಕರೈ ನಿವಾಸಿ ಶಮೀರ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಯಿಂದ ಒಂದು ಲಕ್ಷ ಏಳು ಸಾವಿರ ಬೆಲೆ ಬಾಳುವ ವಿವೊ ಕಂಪನಿಯ ಹೊಸ ಮೊಬೈಲ್ ಗಳು ಹಾಗೂ ಗ್ರಾಹಕರ ದುರಸ್ತಿಗೆ ಬಂದ ಪೋನ್ ಹಾಗೂ ಇನ್ನಿತರ ಬಿಡಿಭಾಗಗಳು ಸೇರಿ ಸುಮಾರು ಒಂದು ಲಕ್ಷ ನಲ್ವತ್ತು ಸಾವಿರ ರೂಪಾಯಿ ಮೌಲ್ಯದ ಸೊತ್ತು ಕಳವಾಗಿದ್ದು, ಈ ಬಗ್ಗೆ ಕೊಣಾಜೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಂಧಿಸಿದ ಬಂಟ್ವಾಳ ಪೊಲೀಸರು !

error: Content is protected !!