ಎನ್‌ಎಎಫ್‌ಎಲ್‌ ಶಾಲೆಗೆ ಬಾಂಬ್‌ ಬೆದರಿಕೆ ಮೇಲ್‌ ಪ್ರಕರಣ..!! ➤ ‘ಐ ಆ್ಯಮ್‌ ಡೂಯಿಂಗ್‌ ಫಾರ್‌ ಫನ್‌’ ಎಂದು ಹೇಳಿಕೆ ಕೊಟ್ಟ ವಿದ್ಯಾರ್ಥಿ..!!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.08. ನ್ಯಾಷನಲ್‌ ಅಕಾಡೆಮಿ ಫಾರ್‌ ಲರ್ನಿಂಗ್‌ ಶಾಲೆಗೆ ಬಾಂಬ್‌ ಸ್ಫೋಟದ ಬೆದರಿಕೆಯೊಡ್ಡಿ ಕಳುಹಿಸಿದ್ದ ಇ-ಮೇಲ್‌ ಮೂಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, 14 ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.


ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯು, ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದರೆ ಶಾಲೆಯವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ಕುಚೇಷ್ಟೆಯಿಂದ ಇ-ಮೇಲ್‌ ಮಾಡಿದ್ದ ಸಂಗತಿ ತನಿಖೆಯಲ್ಲಿ ತಿಳಿದುಬಂದಿದೆ. ‘ಐ ಆ್ಯಮ್‌ ಡೂಯಿಂಗ್‌ ಫಾರ್‌ ಫನ್‌’  ಎಂದು ವಿದ್ಯಾರ್ಥಿ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Also Read  ಬೀದಿನಾಯಿಗಳ ದಾಳಿಗೆ ಬಾಲಕ ಮೃತ್ಯು..!

 

 

error: Content is protected !!
Scroll to Top