ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ನೀರು ನದಿಗೆ..!! ➤  ಮೀನುಗಳ ದಾರುಣ ಅಂತ್ಯ..!!

(ನ್ಯೂಸ್ ಕಡಬ) newskadaba.com  ಗೌರಿ ಬಿದನೂರು, ಜ.08. ಪಿನಾಕಿನಿ ನದಿಯಲ್ಲಿ  ಅಕ್ರಮವಾಗಿ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ ಸುರಿದಿರುವ ಹಿನ್ನೆಲೆಯಲ್ಲಿ ನದಿಯಲ್ಲಿನ ಮೀನುಗಳ ಮೃತಪಟ್ಟಿವೆ ಎನ್ನಲಾಗಿದೆ. ಚಿಕ್ಕಬಳ್ಳಾಪುರ ರಸ್ತೆಯ ಉತ್ತರ ಪಿನಾಕಿನಿ ನದಿ ಸೇತುವೆ ಬಳಿ ದುರ್ವಾಸನೆ ಬೀರುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.


ಕಾರ್ಖಾನೆಯ ತ್ಯಾಜ್ಯವನ್ನು ಈ ಹಿಂದೆ ರಾತ್ರೋರಾತ್ರಿ ರೈತರ ಹೊಲಗಳಲ್ಲಿ ಅಕ್ರಮವಾಗಿ ಬಿಟ್ಟು ಹೋಗುತ್ತಿದ್ದರು. ಆದರೆ ಇದೀಗ ನಗರದ ಹೃದಯ ಭಾಗದಲ್ಲಿನ ಚಿಕ್ಕಬಳ್ಳಾಪುರ ರಸ್ತೆಯ ಉತ್ತರ ಪಿನಾಕಿನಿ ಸೇತುವೆ ಬಳಿಯ ರಾಸಾಯನಿಕ ತ್ಯಾಜ್ಯವನ್ನು ಸುರಿದಿದ್ದಾರೆ. ಇದರ ಸಮೀಪದಲ್ಲೇ ನಗರ ಪೊಲೀಸ್‌ ಠಾಣೆ ಇದ್ದು ಅವರ ಕಣ್ಣು ತಪ್ಪಿಸಿ ಈ ಅಕ್ರಮವನ್ನು ಎಸಗಿದ್ದಾರೆ ಎಂದು ತಿಳಿದುಬಂದಿದೆ.

Also Read  ಮೂರು ವರ್ಷಗಳ ಹಿಂದಿನ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ ► ಅಂತಿಮ ವರದಿ ಸಲ್ಲಿಸಲಾಗಿದ್ದ ಪ್ರಕರಣಕ್ಕೆ ಮರುಜೀವ ನೀಡಿದ ಉಪ್ಪಿನಂಗಡಿ ಪೊಲೀಸರು

 

error: Content is protected !!
Scroll to Top