ತಿರುಮಲದಲ್ಲಿ ವಸತಿ ಕೊಠಡಿಗಳ ಬಾಡಿಗೆ ದರ ಭಾರಿ ಹೆಚ್ಚಳ…!!!

(ನ್ಯೂಸ್ ಕಡಬ) newskadaba.com  ತಿರುಮಲ, ಜ.08. ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಟಿಟಿಡಿ ಹೆಚ್ಚಳ ಮಾಡಿದೆ ಎಂದು ವರದಿಯಾಗಿದೆ.

ನಂದಕಂ, ಪಾಂಚಜನ್ಯಂ, ಕೌಸ್ತುಭಂ ಮತ್ತು ವಕುಳಮಾತಾ ಅತಿಥಿಗೃಹಗಳ ಕೊಠಡಿಗಳ ಬಾಡಿಗೆ ದರವನ್ನು 500-600 ರು.ಗಳಿಂದ 1000 ರು.ಗಳಿಗೆ ಏರಿಕೆ ಮಾಡಿದ್ದು, ನಾರಾಯಣ ಗಿರಿ ವಿಶ್ರಾಂತಿ ಗೃಹದ 1,2,3 ನೇ ಬ್ಲಾಕ್‌ನ ಬಾಡಿಗೆಯನ್ನು 1500 ರು.ಗಳಿಂದ 1700 ರು.ಗೆ ಏರಿಕೆ ಮಾಡಲಾಗಿದೆ.

ವಿಶ್ರಾಂತಿ ಗೃಹ-4ರ ಬಾಡಿಗೆ 750 ರಿಂದ 1700 ರು.ಗೆ ಏರಿಕೆಯಾಗಿದೆ. ಕಾರ್ನರ್‌ ಸೂಟ್‌ಗಳ ದರ ಜಿಎಸ್‌ಟಿ ಸೇರಿ 2200 ರು.ಗಳಾಷ್ಟಗಿದ್ದು, ವಿಶೇಷ ಕೊಠಡಿಗಳ ಬಾಡಿಗೆ ದರ 2800 ರು.ಗೆ ಏರಿಕೆಯಾಗಿದೆ. ಭಕ್ತಾದಿಗಳು ಬಾಡಿಗೆಯೊಂದಿಗೆ ಠೇವಣಿಯನ್ನು ಕೂಡ ಪಾವತಿಸಬೇಕಾಗಿದೆ.

Also Read  ➤ ಜನರೇಟರ್‌ಗೆ ಕೂದಲು ಸಿಲುಕಿ 13 ವರ್ಷದ ಬಾಲಕಿ ಮೃತ್ಯು..!

 

 

 

error: Content is protected !!
Scroll to Top